ಕೆಲವು ಪುಂಡು–ಪೋಕರಿಗಳು ತಮ್ಮ ಹೊಲಸು ಕೆಲಸಗಳಿಂದ ದೇಶದ ಮಾನವನ್ನು ವಿದೇಶಗಳ ಮುಂದೆ ಹರಾಜು ಹಾಕುತ್ತಿದ್ದಾರೆ. ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದಿದ್ದ ವಿದೇಶಿ ಮಹಿಳೆಯೊಬ್ಬರನ್ನು ಓಲಾ ಕ್ಯಾಬ್ಗೆ ಹತ್ತಿಸಿಕೊಂಡಿದ್ದ ಚಾಲಕ ಹಾಗೂ ಆತನ ಇಬ್ಬರು ಸಹಚರರು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಬೆತ್ತಲೆ ಮಾಡಿ, ನಡುರಾತ್ರಿಯಲ್ಲಿಯೇ ಕಾರಿನಿಂದ ಹೊರದಬ್ಬಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿರುವುದು ಆಘಾತಕಾರಿ. ಇಂತಹ ನೀಚರಿಗೆ ತಕ್ಕ ಶಿಕ್ಷೆ ಆಗಬೇಕು. ಅಂದರೆ ಮಾತ್ರ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮೆಚ್ಚಿ ಬರುವ ಅದೆಷ್ಟೋ ವಿದೇಶಿಯರಿಗೆ ನಮ್ಮ ದೇಶದ ಬಗ್ಗೆ ಗೌರವ ಉಳಿಯಲು ಸಾಧ್ಯ.

ಮಂಜುನಾಥ ಉಮೇಶ ನಾಯ್ಕ, ಮುರ್ಡೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.