ಪರಿಸರ ಪ್ರಜ್ಞೆ: ಶಿಕ್ಷಕರ ಮಾದರಿ

ಸೋಮವಾರ, ಜೂಲೈ 22, 2019
24 °C

ಪರಿಸರ ಪ್ರಜ್ಞೆ: ಶಿಕ್ಷಕರ ಮಾದರಿ

Published:
Updated:

‘ಕಾಡು ಬೆಳೆಸಲು ಹೊರಟ ಶಾಲಾ ಮಕ್ಕಳು’ ವರದಿ (ಪ್ರ.ವಾ., ಜುಲೈ 2, ಉತ್ತರ ಕನ್ನಡ ಆವೃತ್ತಿ) ಓದಿ ಮನಸ್ಸು ತುಂಬಿ ಬಂತು.

ಕಾಂಕ್ರೀಟ್ ಕಾಡು ಬೆಳೆಸಿ ಇಂದು ನಾವು ಪಡುತ್ತಿರುವ ಪಾಡು ಮುಂದಿನ ಪೀಳಿಗೆಗೆ ಹೊರೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವ ಈ ಸಂದರ್ಭದಲ್ಲಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಎಲ್ಲ ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳನ್ನು ಉನ್ನತ ಶಿಕ್ಷಣ ಪಡೆಯುವಷ್ಟಕ್ಕೇ ಸೀಮಿತಗೊಳಿಸದೆ, ಪರಿಸರದ ಬಗ್ಗೆ, ನೆಲ-ಜಲದ ವಸ್ತುಸ್ಥಿತಿಯ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾದ ಅನಿವಾರ್ಯ ಇದೆ.

ಇಂತಹ ಅತ್ಯಮೂಲ್ಯವಾದ ಪರಿಸರ ಪ್ರಜ್ಞೆಯನ್ನು ಮಕ್ಕಳಲ್ಲಿ ಬಿತ್ತುತ್ತಿರುವ ಶಿರಸಿ ತಾಲ್ಲೂಕಿನ ತಿಗಣಿಯ ಶಾಲಾ ಶಿಕ್ಷಕರು ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !