ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳುವುದು ಒಂದು...

Last Updated 17 ಜುಲೈ 2018, 19:37 IST
ಅಕ್ಷರ ಗಾತ್ರ

ಹೇಳುವುದು ಒಂದು...

ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ ಅವರು ತಿಕೋಟ ಪ್ರದೇಶದ ದುರ್ಗಾದೇವಿ ಜಾತ್ರೆಯ ಸಮಾರಂಭದಲ್ಲಿ ಆಡಿದ ಮಾತುಗಳನ್ನು (ಪ್ರ.ವಾ., ಜುಲೈ 14) ಓದಿ ಇವರು ನಿಜವಾಗಿಯೂ ಲಿಂಗಾಯತರೇ? ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದವರೇ? ಎಂಬ ಶಂಕೆ ಮೂಡಿತು.

‘ನಾನು ಯಾವಾಗಲೂ ಪವರ್‌ಫುಲ್‌... ಮುಖ್ಯಮಂತ್ರಿಯಾಗುವ ಆಸೆ ಇದೆ... ದುರ್ಗಾದೇವಿಯ ಆಶೀರ್ವಾದ ನನ್ನ ಮೇಲಿದೆ...’ ಮುಂತಾಗಿ ಅವರು ಹೇಳಿರುವುದು ಲಿಂಗಾಯತ ಧರ್ಮ ತತ್ತ್ವಕ್ಕೆ ವಿರುದ್ಧವಾಗಿದೆ. ‘ಆಸೆಯೆಂ
ಬುದು ಅರಸಂಗಲ್ಲದೆ ಶರಣರಿಗೆ ಸಲ್ಲದಯ್ಯ’ ಎನ್ನುವ ಮತ್ತು ‘ತನ್ನ ಬಣ್ಣಿಸಬೇಡ...’ ಎನ್ನುವ ಶರಣರ ಮಾತುಗಳಿಗೆ ಇವರು ಏನು ಬೆಲೆ ಕೊಟ್ಟಂತಾಯಿತು? ಇಷ್ಟಲಿಂಗವನ್ನು ಬಿಟ್ಟು, ಅನ್ಯ ದೈವದ ಆಶೀರ್ವಾದ ತನಗಿದೆ ಎಂದು ಹೇಳುವುದು ಎಷ್ಟು ಸರಿ? ಅಧಿಕಾರ, ಸ್ಥಾನಮಾನ ತಾನಾಗಿ ಒಲಿದು ಬರಬೇಕು (ಕುಮಾರಸ್ವಾಮಿ ಅವರಿಗೆ ಬಂದಂತೆ). ಅದಕ್ಕಾಗಿ ಪರಿತಪಿಸುವುದು ಶರಣ ತತ್ತ್ವಗಳಿಗೆ ವಿರುದ್ಧವಾದುದು. ಹೋರಾಟದ ಹೆಸರಲ್ಲಿ ಹೇಳುವುದು ಒಂದು; ಮಾಡುವುದು ಮತ್ತೊಂದು. ಇದು ಸರಿಯೇ?

ಪಿ. ಯಶೋದಾ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT