ಮಂಗಳವಾರ, ಮೇ 24, 2022
21 °C

ಇವರು ಮಾಡಿದ್ದೂ ಅದೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇನ್ನೊಂದು ಪಕ್ಷ ಇದ್ದಿದ್ದರೆ ಟವಲ್ ಹಾಕುತ್ತಿದ್ದರು’ ಎಂದು ಎಚ್.ವಿಶ್ವನಾಥ್ ಅವರ ಕುರಿತು ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಇದೇ ಕುಮಾರಸ್ವಾಮಿಯವರು ಕೆಲವು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಲು ಬಿಜೆಪಿ ಜೊತೆ 20-20 ತಿಂಗಳು ಅಧಿಕಾರ ಹಂಚಿಕೆಯ ಒಪ್ಪಂದದ ಮೇರೆಗೆ ಕೈಜೋಡಿಸಿದ್ದು, ನಂತರ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಬೆಂಬಲ ಹಿಂತೆಗೆದುಕೊಂಡು ವಚನಭ್ರಷ್ಟ ಎನಿಸಿಕೊಂಡಿದ್ದು ಮತ್ತು 2018ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ಸಿನೊಂದಿಗೆ ಕೈ ಜೋಡಿಸಿ ಮೈತ್ರಿ ಸರ್ಕಾರ ರಚಿಸಿದ್ದು, ತದನಂತರ ಅಲ್ಲೂ ಒಡಕುಂಟಾಗಿ, ‘ಮೈತ್ರಿ ಸರ್ಕಾರದ ಕ್ಲರ್ಕ್ ಆಗಿದ್ದೆ ನಾನು’ ಎಂದು ವ್ಯರ್ಥಾಲಾಪ ಮಾಡುತ್ತಿರುವುದು ಯಾವುದನ್ನೂ ಜನ ಮರೆತಿಲ್ಲ.

ಇತ್ತೀಚೆಗಿನ ಕಾಲಮಾನದಲ್ಲಿ ರಾಜಕೀಯ ಎಂದರೆ ಹೀಗೇ ಎಂಬಂತಾಗಿಬಿಟ್ಟಿದೆ. ಯಾರೂ ಅತೀತರಲ್ಲ. ಎಲ್ಲರೂ ಅಧಿಕಾರ ವ್ಯಾಮೋಹಿಗಳೇ ಸರಿ. ಅವರಿವರ ಮೇಲೆ ದೂರುತ್ತಾ ಕೂರದೆ, ಮಾಡಿದ ತಪ್ಪುಗಳಿಂದ ಈಗ ಪಾಠ ಕಲಿತು ಜನಪರ ಕೆಲಸಗಳಲ್ಲಿ ಕಾರ್ಯಪ್ರವೃತ್ತರಾದರೆ, ಕರ್ನಾಟಕದ ಜನರ ಕೊರಳಾಗಬೇಕಾದ ಪ್ರಾದೇಶಿಕ ಪಕ್ಷವನ್ನು ಅವರು ಮುಂದಾದರೂ ಮೇಲಕ್ಕೆತ್ತಬಹುದು. ಇಲ್ಲವಾದಲ್ಲಿ ಎರಡು ದೊಡ್ಡ ಪಕ್ಷಗಳ ನಡುವೆ ಸಿಲುಕಿ ಮಾಯವಾಗುವ ದಿನಗಳು ದೂರವಿಲ್ಲ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು