ಶನಿವಾರ, ಜೂನ್ 19, 2021
26 °C

ವ್ಯತ್ಯಾಸ ಅರಿಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಒಂದೆಡೆ ಸುಳ್ಳು ಸುದ್ದಿಗಳಿಂದ ಅಮಾಯಕರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಹಲವಾರು ಹಲ್ಲೆಗಳು ಸಾವಿನಲ್ಲಿ ಅಂತ್ಯವಾಗಿವೆ. ಮತ್ತೊಂದೆಡೆ, ದಿಢೀರ್ ನ್ಯಾಯವೇ ಸರಿಯಾದ ಮಾರ್ಗ ಎಂಬ ಸಂದೇಶವನ್ನು ಹೈದರಾಬಾದಿನ ಎನ್‌ಕೌಂಟರ್‌ ರವಾನಿಸಿದೆ. ದಿಢೀರ್‌ ನ್ಯಾಯದಾನಕ್ಕೂ ಶೀಘ್ರ ನ್ಯಾಯದಾನಕ್ಕೂ ಇರುವ ವ್ಯತ್ಯಾಸವನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ದಿಢೀರ್‌ ನ್ಯಾಯಕ್ಕೆ  ಅನುಮಾನವೇ ಬಲವಾದ ಆಧಾರ. ವಿಚಾರಣಾ ಪ್ರಕ್ರಿಯೆಗೆ ಅದು ಒಳಪಟ್ಟಿರುವುದಿಲ್ಲ. ಆದರೆ, ಶೀಘ್ರ ನ್ಯಾಯದಾನವು ಆಪಾದಿತನು ಅಪರಾಧಿ ಎಂದು ಅನುಮಾನಾತೀತವಾಗಿ ಖಚಿತವಾದ ನಂತರ ನೀಡುವುದಾಗಿರುತ್ತದೆ.
ನಮ್ಮ ನ್ಯಾಯವ್ಯವಸ್ಥೆಯು ಶೀಘ್ರ ನ್ಯಾಯದಾನ ನೀಡುವಲ್ಲಿ ವಿಫಲವಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಈ ನ್ಯೂನತೆಗಳನ್ನು ಸರಿಪಡಿಸಲು ನಾಗರಿಕರು ಆಗ್ರಹಿಸಬೇಕು. ಆಗಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಇಲ್ಲವಾದರೆ ಅರಾಜಕತೆ ಆವರಿಸಿಕೊಳ್ಳುತ್ತದೆ.

ದರ್ಶನ್, ಕಿಶೋರ್, ನಿರಂಜನ್, ಶಿವಮೊಗ್ಗ
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು