ಶಾಲೆಗಳ ಬೆದರಿಕೆ ಸಲ್ಲ
ಪೋಷಕರು ಶುಲ್ಕ ಕಟ್ಟದಿದ್ದರೆ ಮಕ್ಕಳಿಗೆ ಆನ್‌ಲೈನ್ ತರಗತಿ ಸ್ಥಗಿತಗೊಳಿಸುವುದಾಗಿ ಖಾಸಗಿ ಶಾಲೆಗಳು ಬೆದರಿಸುತ್ತಿರುವುದು ಸರಿಯಾದ ನಡೆಯಲ್ಲ. ಮೊದಲೇ ಕೋವಿಡ್ ಭೀತಿ, ಆದಾಯ ಖೋತಾ, ಆನ್‌ಲೈನ್ ಪಾಠಕ್ಕಾಗಿ ಮೊಬೈಲ್, ಲ್ಯಾಪ್‌ಟಾಪ್ ಖರೀದಿಯ ಅನಿವಾರ್ಯ, ಅವುಗಳ ಸತತ ವೀಕ್ಷಣೆಯಿಂದ ಮಕ್ಕಳಲ್ಲಿ ದೃಷ್ಟಿದೋಷ, ಅಂತರ್ಜಾಲದಲ್ಲಿ ಮಕ್ಕಳು ಅಶ್ಲೀಲ ವೆಬ್‌ಸೈಟ್ ತಡಕಾಡುವ ಸಂಭವ ಇವೆಲ್ಲವುಗಳಿಂದ ಪಾಲಕರು ಹೈರಾಣಾಗಿದ್ದಾರೆ.
ಆನ್‌ಲೈನ್ ಶಿಕ್ಷಣದಿಂದಾಗಿ ಶಾಲೆಗಳಿಗೆ ಶಾಲಾ ವಾಹನ, ಡ್ರೈವರ್ ಹಾಗೂ ಆಳುಕಾಳುಗಳ ನಿರ್ವಹಣಾ ಖರ್ಚು ಉಳಿತಾಯವಾಗಿದೆ. ಕೆಲವೇ ಶಿಕ್ಷಕರ ಸಹಯೋಗದಲ್ಲಿ ಅವರವರ ಮನೆಗಳಿಂದಲೇ ಪಾಠ ಮಾಡಿಸಲಾಗುತ್ತಿದೆ. ಅಷ್ಟಕ್ಕೂ ಆಯಾ ತಿಂಗಳ ಶುಲ್ಕ ವಸೂಲಿಯಿಂದಲೇ ಆಯಾ ತಿಂಗಳ ವೆಚ್ಚವನ್ನು ಭರಿಸುವಂತಹ ಪರಿಸ್ಥಿತಿ ಖಾಸಗಿ ಶಾಲೆಗಳಿಗಿಲ್ಲ. ಶಾಲಾ ಸಾಮಾಜಿಕ ಹೊಣೆಗಾರಿಕೆ ನಿಧಿಯ ಖಾತೆಯಲ್ಲಿನ ಧನವನ್ನು ಈಗ ವ್ಯಯಿಸಿ, ಮುಂದೆ ವಸೂಲು ಮಾಡಿಕೊಳ್ಳಬಹುದಲ್ಲವೇ? ಶುಲ್ಕ ಸಂಗ್ರಹದಲ್ಲಿ ಔದಾರ್ಯ ತೋರಿ, ಹೆಚ್ಚಿನ ಕಂತುಗಳಲ್ಲಿ ಪಡೆಯಬಾರದೇಕೆ?
-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.