ಬುಧವಾರ, ಡಿಸೆಂಬರ್ 1, 2021
20 °C

ಇದು ಚುನಾವಣಾ ಪ್ರಚಾರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಎರಡು ಕ್ಷೇತ್ರಗಳಿಗೆ ಈಗ ಉಪಚುನಾವಣೆ ನಡೆಯುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಇದೊಂದು ಸುವರ್ಣಾವಕಾಶ. ಆಡಳಿತ ವಹಿಸಿಕೊಂಡ ದಿನದಿಂದ ಕ್ಷೇತ್ರದಲ್ಲಿ ಆಡಳಿತ ಪಕ್ಷ ಇದುವರೆಗೂ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದನ್ನು ಮತದಾರರ ಗಮನಕ್ಕೆ ತಂದು, ಹೆಮ್ಮೆಯಿಂದ ಇನ್ನೂ ಏನು ಮಾಡುವುದಿದೆ ಎಂದು ಹೇಳಿ ಚುನಾವಣೆ ಗೆಲ್ಲಲು ಇದೊಂದು ವೇದಿಕೆ. ಹಾಗೆಯೇ ವಿರೋಧ ಪಕ್ಷಗಳಿಗಂತೂ ದೇವರು ಕೊಟ್ಟ ವರ. ಆಡಳಿತ ಪಕ್ಷದ ಲೋಪದೋಷಗಳನ್ನು ಹೇಳಿ ಅದರ ಅಸಾಮರ್ಥ್ಯವನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟು ‘ಇನ್ನೂ ಅವರ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೀರಾ?’ ಎಂದು ಪ್ರಶ್ನಿಸಿ, ಮತದಾರರ ಮನಗೆದ್ದು ಚುನಾವಣೆ ಗೆಲ್ಲಲು ಒಂದು ಸುಸಂದರ್ಭ.

ಇದು ಮತದಾರರಲ್ಲಿ ಸರ್ಕಾರದ ಆಡಳಿತ ವೈಫಲ್ಯ ಅಥವಾ ಸಾಫಲ್ಯವನ್ನು ಉದಾಹರಣೆ ಸಹಿತ ಬಯಲು ಮಾಡುವ ಸಂದರ್ಭ. ಆದರೆ ಇದರ ಅರಿವು ಇಲ್ಲದೆ ರಾಜಕಾರಣಿಗಳು ಒಬ್ಬರನ್ನೊಬ್ಬರು ಹೀನಾಮಾನವಾಗಿ ತೆಗಳುತ್ತಾ ಪರಸ್ಪರ ಕೆಸರೆರಚಾಡಿಕೊಂಡು ಕುಣಿದಾಡುತ್ತಿರುವುದನ್ನು ಕಂಡು ಜನ ಅಸಹ್ಯಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ನಾಯಕರ ಹೆಸರುಗಳನ್ನೂ ಎಳೆದುತಂದು ಅವರ ಮರ್ಯಾದೆಯನ್ನು ಹರಾಜು ಹಾಕಲು ಹೊರಟಿರುವುದು ನಾಚಿಕೆಗೇಡು.

ಸತ್ಯಬೋಧ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು