ಶನಿವಾರ, ಜನವರಿ 29, 2022
23 °C

ದೇವರೂ ದುಬಾರಿ...!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ತಿರುಮಲ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿನ ₹ 1 ಕೋಟಿಯಿಂದ 1.5 ಕೋಟಿ ಬೆಲೆಯ ಉದಯಾಸ್ತಮಾನ ಸೇವೆಯು ವಿಶ್ವದಲ್ಲೇ ಅತ್ಯಂತ ದುಬಾರಿ ಸೇವೆಯಾಗಲಿದೆ ಎಂದು ವರದಿಯಾಗಿದೆ (ಪ್ರ.ವಾ., ಜ. 2). ಆ ಸೇವೆಯಲ್ಲಿ ಐವರಿಗೆ ಗರ್ಭಗುಡಿ ಪ್ರವೇಶ ಮತ್ತು ನಿಗದಿಪಡಿಸಿದ ಸ್ಥಳಗಳಲ್ಲಿ ಕುಳಿತು ಎಲ್ಲ ಕಾರ್ಯಕ್ರಮಗಳನ್ನೂ ವೀಕ್ಷಿಸುವ ಅವಕಾಶ ಕೂಡಾ ಲಭ್ಯವಿದೆ. ಈ ದುಬಾರಿ ಸೇವೆ ಪಡೆಯಲು ಅನೇಕ ಸಿರಿವಂತ ಭಕ್ತರು ಕಾತರ ರಾಗಿರಬಹುದು. ಅಂದರೆ, ಹಣ ಇದ್ದವರಿಗೆ ಮಾತ್ರ ಇಂತಹ ಸೇವೆಗಳು ಲಭ್ಯವಾದರೆ ಬಯಕೆ ಉಳ್ಳ ಇತರರನ್ನು ಹಣದಿಂದ ಅಳೆದು ದೂರ ಇರಿಸಿದಂತೆ ಅಲ್ಲವೇ? ಹಣ ಇದ್ದವರು ಎಲ್ಲವನ್ನೂ ಪಡೆಯಬಹುದಾದರೆ ಸಾಮಾಜಿಕ ನ್ಯಾಯ ಎಲ್ಲಿಗೆ ಬಂತು? ದೇವರ ದರ್ಶನಕ್ಕೂ ಈ ಪರಿ ದುಬಾರಿ ದರ ವಿಧಿಸುವುದು ವ್ಯಾಪಾರ ಮಾಡಿದಂತೆಯೇ ಅಲ್ಲವೇ? ಇದು ಸಹ ಒಂದು ಉದ್ಯಮವಾಯಿತೇ? ದೇವರು ಬಡವನ ಕೈಗೆಟುಕದಿರೆ ಆತ ದೇವರು ಅಂತ ಹೇಗೆ ಆದಾನು? ಎಲ್ಲರಿಗೂ ದೇವನೊಬ್ಬನೇ ಆಗಿರುವಾಗ ಅವನ ಭಕ್ತರಲ್ಲಿ ಭೇದಭಾವ ಮಾಡದೆ ಒಂದೇ ರೀತಿಯಲ್ಲಿ ಪರಿಗಣಿಸಿದರೆ ಸಮಾನಭಾವ ಮೂಡುತ್ತದೆ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.