ಶೌಚಾಲಯ ಕಡ್ಡಾಯವಾಗಲಿ

7

ಶೌಚಾಲಯ ಕಡ್ಡಾಯವಾಗಲಿ

Published:
Updated:

ಬೆಂಗಳೂರು ನಗರದಲ್ಲಿ ಸಾವಿರಾರು ಹೋಟೆಲ್‌ಗಳು ಪ್ರತಿದಿನ ಹಲವಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತವೆ. ಸಾವಿರಾರು ಗ್ರಾಹಕರನ್ನು ಸೆಳೆಯುವ ಇಂಥ ಕೆಲವು ಹೋಟೆಲ್‌ಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದಾಗಿ ಅಲ್ಲಿಗೆ ಬರುವ ಗ್ರಾಹಕರು ಸಂಕಷ್ಟ ಎದುರಿಸಬೇಕಾಗುತ್ತದೆ.

ನಗರದ ಎಲ್ಲ ಹೋಟೆಲ್‌ಗಳಲ್ಲಿಯೂ ಕನಿಷ್ಠ ಒಂದು ಶೌಚಾಲಯವನ್ನಾದರೂ ಕಡ್ಡಾಯವಾಗಿ ನಿರ್ಮಿಸಬೇಕು ಎಂಬ ನಿಯಮವನ್ನು ಬಿಬಿಎಂಪಿ ರೂಪಿಸಬೇಕು. ಹೋಟೆಲ್‌ನವರೂ ಸ್ವಯಂಪ್ರೇರಣೆಯಿಂದ ಗ್ರಾಹಕರಿಗೆ ಈ ಸೌಲಭ್ಯ ಒದಗಿಸಲು ಮುಂದಾಗಬೇಕು. ಶೌಚಾಲಯ ನಿರ್ಮಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡುವುದೂ ಅಗತ್ಯವಾಗಿದೆ.

ಕೆ.ಎಸ್. ನಾಗರಾಜ್, ಬೆಂಗಳೂರು

***

ಪ್ರಯಾಣಿಕರಿಗೆ ಬರೆ

ರಾಜ್ಯ ಹೆದ್ದಾರಿಗಳಲ್ಲೂ ಪ್ರಯಾಣಿಕರಿಂದ ಟೋಲ್‌ ಸಂಗ್ರಹಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ತೈಲ ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ಈ ತೀರ್ಮಾನದಿಂದ ಗಾಯದ ಮೇಲೆ ಬರೆ ಎಳೆದಂತಾಗುವುದು. ಇದರಿಂದ ಸರ್ಕಾರವು ಜನರ ಶತ್ರುವಿನಂತೆ ಕೆಲಸ ಮಾಡಿದಂತಾಗುತ್ತದೆ. ಆದ್ದರಿಂದ ಈ ಯೋಚನೆಯನ್ನು ಕೈಬಿಡುವುದು ಲೇಸು.

ರವಿಕುಮಾರ ಮಠಪತಿ, ವಡಗಾಂವ, ಬೀದರ್‌

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !