ಮಂಗಳವಾರ, ಜನವರಿ 19, 2021
22 °C

ಟಿಕೆಟ್‌ ನೀಡಿಕೆ: ಕಿರಿಕಿರಿ ತಪ್ಪಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಚಾರಿತ್ರಿಕ ಪ್ರದೇಶಗಳನ್ನು ವೀಕ್ಷಿಸಲು ತೆರಳುವ ಪ್ರವಾಸಿಗರಿಗೆ ಟಿಕೆಟ್‌ ನೀಡಿಕೆಯಲ್ಲಿನ ಗೊಂದಲದಿಂದ ಹಲವೆಡೆ ಕಿರಿಕಿರಿ ಉಂಟಾಗುತ್ತಿದೆ. ಈ ತಾಣಗಳ ಒಳಗೆ ಹೋಗಲು ಕನಿಷ್ಠ ಅರ್ಧ ಗಂಟೆ ಕಾಯುವಂತಹ ಸ್ಥಿತಿ ಇದೆ. ಅಂದರೆ, ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡ ಟಿಕೆಟ್‌ ಮೇಲೆ ಕ್ಯುಆರ್‌ ಕೋಡ್‌ ಇರುತ್ತದೆ. ಫೋನ್‌ನಲ್ಲಿರುವ ಈ ಟಿಕೆಟ್‌ ಅನ್ನು ಸ್ಮಾರಕಗಳ ಪ್ರವೇಶ ದ್ವಾರದ ಬಳಿ ತೋರಿಸಿದರೆ ಅಲ್ಲಿನ ಸಿಬ್ಬಂದಿ ಅದನ್ನು ಸ್ಕ್ಯಾನ್‌ ಮಾಡಿ ಪ್ರವಾಸಿಗರನ್ನು ಒಳಗೆ ಬಿಡುತ್ತಾರೆ. ಒಂದು ವೇಳೆ ಈ ಸಂದರ್ಭದಲ್ಲಿ ಸರ್ವರ್ ದೋಷವಿದ್ದರೆ ಅಥವಾ ನೆಟ್‌ವರ್ಕ್‌ ಸಿಗದಿದ್ದರೆ ಗಂಟೆಗಟ್ಟಲೆ ಸರದಿಯಲ್ಲಿ ಕಾಯಬೇಕಾಗುತ್ತದೆ.

ಕೋವಿಡ್ ಕಾರಣದಿಂದ ಇಂತಹ ಸ್ಥಿತಿ ಒದಗಿದೆ. ಈ ಮೊದಲು ಕ್ಯಾಶ್ ಕೌಂಟರ್‌ನಲ್ಲಿ ನಗದು ಕೊಟ್ಟು ಟಿಕೆಟ್‌ ಪಡೆಯಬಹುದಾಗಿತ್ತು. ಗೂಗಲ್ ಪೇ, ಫೋನ್ ಪೇ ಅಂತಹವುಗಳ ಮೂಲಕವೂ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿ ಅಥವಾ ಮೊದಲಿನಂತೆ ಕ್ಯಾಶ್ ಪೇ ಮಾತ್ರ ಇರಲಿ. ಇಲ್ಲದಿದ್ದರೆ, ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವವರ ಸಮಯವು ಇಂತಹ ಕಿರಿಕಿರಿಗಳಿಗೆ ಅನವಶ್ಯಕವಾಗಿ ವ್ಯಯ ಆಗುತ್ತದೆ. ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ಗಮನಹರಿಸಲಿ.

- ಬಿ.ಮೊಹಿದ್ದೀನ್ ಖಾನ್, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.