ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಘಂಟು ಬ್ರಹ್ಮನಿಗೆ ಭಾಷ್ಪಾಂಜಲಿ

Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕನ್ನಡ ಭಾಷೆಯ ಶಬ್ದಪ್ರಯೋಗದ ಸಂದರ್ಭದಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯದಲ್ಲಿ ಮೂಡಿಬಂದ ಬದಲಾವಣೆಗಳ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆಪ್ರೊ. ಜಿ.ವೆಂಕಟಸುಬ್ಬಯ್ಯ ಅವರು ನೀಡಿದ ತಿಳಿವಳಿಕೆ ಅನನ್ಯ. ಸ್ವತಃ ಪ್ರಾಧ್ಯಾಪಕರಾಗಿದ್ದ ಅವರು ತಮ್ಮ ಇಳಿವಯಸ್ಸಿನಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ‘ಇಗೋ ಕನ್ನಡ’ ಅಂಕಣದ ಮೂಲಕ ವಿವಿಧ ಶಬ್ದ, ನಾಣ್ನುಡಿಗಳ ಹುಟ್ಟು, ಪದಪ್ರಯೋಗಗಳನ್ನು ಜನರಿಗೆ ತಿಳಿಸಿಕೊಟ್ಟರು. ಕನ್ನಡ ಶಬ್ದ ಭಂಡಾರವನ್ನು ನಿಘಂಟು ರೂಪದಲ್ಲಿ ಸಂಗ್ರಹಿಸಿ ‘ನಿಘಂಟು ಬ್ರಹ್ಮ’ ಎಂದು ಕರೆಸಿಕೊಂಡರು. ಅಂಕಣ ಬರಹಗಾರ, ಭಾಷಾತಜ್ಞ ವೆಂಕಟಸುಬ್ಬಯ್ಯನವರು ವಿಧಿವಶರಾದುದು ಕನ್ನಡ ಓದುಗರಿಗೆ, ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

- ಬಸವರಾಜ ಹುಡೇದಗಡ್ಡಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT