ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ | 25 ವರ್ಷಗಳ ಹಿಂದೆ: ಮಂಗಳವಾರ, 19-9-1995

Last Updated 18 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ವಾಸುದೇವನ್‌ ಪ್ರಕರಣ: ಸರ್ಕಾರದ ಕ್ಷಮೆಗೆ ಆಗ್ರಹ, ವಿಧಾನಸಭೆ ಕಲಾಪ ಬಹಿಷ್ಕಾರ

ಬೆಂಗಳೂರು, ಸೆ. 18– ವಾಸುದೇವನ್‌ ಪ್ರಕರಣ ಕುರಿತ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಶುಕ್ರವಾರ ಮುಖ್ಯಮಂತ್ರಿ ಉತ್ತರ ನೀಡಿದ ಸಂದರ್ಭದಲ್ಲಿ ವ್ಯಕ್ತವಾದ ಆಡಳಿತ ಪಕ್ಷದ ಸದಸ್ಯರ ಒರಟು ವರ್ತನೆಯಿಂದ ಮನನೊಂದಿರುವ ಪ್ರಮುಖ ವಿರೋಧ ಪಕ್ಷಗಳು ಇಂದು ವಿಧಾನಸಭೆಯ ಕಲಾಪಕ್ಕೆ ಬಹಿಷ್ಕಾರ ಹಾಕಿದವು. ಸಂಜೆವರೆಗೆ ನಡೆದ ಸಂಧಾನ ವಿಫಲವಾಗಿ ಇಡೀ ದಿನದ ಕಾರ್ಯಕಲಾಪ ಸ್ಥಗಿತಗೊಂಡಿತು.

ಕಲಾಪದಿಂದ ಹೊರಗುಳಿದ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್‌, ರೈತ ಸಂಘ ಮತ್ತು ಕನ್ನಡ ಚಳವಳಿಯ ಸದಸ್ಯರು ವಾಸುದೇವನ್‌ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನಡೆದ ವ್ಯವಹಾರಗಳ ಸಂಬಂಧ ಸದನ ಸಮಿತಿ ರಚಿಸುವಂತೆ ಮುಂದಿಟ್ಟ ಬೇಡಿಕೆಯನ್ನು ಸರ್ಕಾರ ಒಪ್ಪದಿದ್ದುದರಿಂದ ತೆರೆಮರೆಯಲ್ಲಿ ನಡೆದ ಸಂಧಾನ ವಿಫಲವಾಗಿ ಕಲಾಪಗಳು ನಡೆಯಲಿಲ್ಲ.

‘ಗ್ರಾನೈಟ್‌ ಲೂಟಿಗೆ ಅಧಿಕಾರಿಯೇ ಹೊಣೆ’

ಬೆಂಗಳೂರು, ಸೆ. 18– ಅರಣ್ಯ ಪ್ರದೇಶದಲ್ಲಿ ನಡೆದಿರುವ ಗ್ರಾನೈಟ್‌ ಅಕ್ರಮ ಗಣಿಗಾರಿಕೆಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯೇ ಸಂಪೂರ್ಣ ಹೊಣೆ ಎಂದು ಸಿಓ‌ಡಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಅರಣ್ಯ ಅಧಿಕಾರಿಗಳ ಬೆಂಬಲದಿಂದಲೇ ಕೆಲವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಗ್ರಾನೈಟ್‌ ಬ್ಲಾಕ್‌ಗಳನ್ನು ಲೂಟಿ ಮಾಡಿದ್ದಾರೆ. ಅವರು ನೀಡಿರುವ ಖೋಟಾ ಪರವಾನಗಿಗಳೇ ಗ್ರಾನೈಟ್‌ ಹಗರಣಕ್ಕೆ ಕಾರಣವಾಗಿವೆ ಎಂದು ‘ಗ್ರಾನೈಟ್‌ ಲೂಟಿ’ ಕುರಿತು ತನಿಖೆ ನಡೆಸುತ್ತಿರುವ ಸಿಓಡಿ ಅಧಿಕಾರಿಗಳ ತಂಡ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT