ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಗಣಿತ ಕಲಿಕೆ: ಸುನಕ್‌ ಸಮರ್ಪಕ ಹೆಜ್ಜೆ

Last Updated 10 ಜನವರಿ 2023, 19:30 IST
ಅಕ್ಷರ ಗಾತ್ರ

ಬ್ರಿಟನ್‌ನ ಪ್ರಧಾನಮಂತ್ರಿ ರಿಷಿ ಸುನಕ್ ಅವರು ತಮ್ಮ ದೇಶದ ಎಲ್ಲಾ ಮಕ್ಕಳಿಗೆ ಹದಿನೆಂಟು ವರ್ಷ ವಯಸ್ಸು ಆಗುವವರೆಗೆ, ಗಣಿತವನ್ನು ಯಾವುದೇ ರೀತಿಯಲ್ಲಾದರೂ ಕಡ್ಡಾಯವಾಗಿ ಕಲಿಸಲು ಯೋಜನೆಯೊಂದನ್ನು ರೂಪಿಸಿದ್ದಾರೆ ಎಂದು ವರದಿಯಾಗಿದೆ. ಇಂದಿನ ದತ್ತಾಂಶ ಮತ್ತು ಸಂಖ್ಯಾಶಾಸ್ತ್ರದ ಯುಗದಲ್ಲಿ ಮಕ್ಕಳು ಹಿಂದೆ ಬೀಳಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯಂತೆ. ಗಣಿತದ ಅವಶ್ಯಕತೆ ಮನಗಂಡರೆ, ಈ ನಿರ್ಧಾರ ದಿಟ್ಟ ಅಷ್ಟೇ ಅಲ್ಲ ಸಮರ್ಪಕ ಹೆಜ್ಜೆ ಸಹ ಎಂದು ಹೇಳಬಹುದು.

ಅನೇಕ ಮಕ್ಕಳಿಗೆ ಗಣಿತ ಎನ್ನುವುದು ಶಿಕ್ಷಣದ ಬೇರೆ ಬೇರೆ ಹಂತಗಳಲ್ಲಿ ಕಬ್ಬಿಣದ ಕಡಲೆಯಾಗಿಯೇ ಪರಿಣಮಿಸಿದೆ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಗಣಿತ ಕಲಿಕೆಯು ಹಿನ್ನಡೆ ಅನುಭವಿಸುತ್ತಲೇ ಇದೆ. ಅದಕ್ಕೆ ದಕ್ಷ ಅಧ್ಯಾಪಕರ ಕೊರತೆಯೂ ಒಂದು ಕಾರಣ ಎಂದು ಹೇಳಬಹುದೇನೊ. ಇಂದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರವೇಶ ಪಡೆಯಬೇಕಾದರೆ, ಗಣಿತದಲ್ಲಿ ಪ್ರಾವೀಣ್ಯ ಅತ್ಯವಶ್ಯಕ. ಹಾಗೆಂದ ಮಾತ್ರಕ್ಕೆ ಎಲ್ಲರೂ ಎಂಜಿನಿಯರ್‌ಗಳು ಆಗಬೇಕೆಂದೇನಿಲ್ಲ. ಹಾಗಾಗಿ ಇಂಗ್ಲೆಂಡ್‌ನಲ್ಲಿ ಈಗ ಮಾಡುತ್ತಿರುವಂತೆ, ಗಣಿತ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದೇ ಆದರೆ, ವಿದ್ಯಾರ್ಥಿಗಳು ಬೇರೆ ಬೇರೆ ಹಂತಗಳಲ್ಲಿ ಮುನ್ನಡೆಯಬಹುದು.

-ಎಂ.ಎಸ್.ರಘುನಾಥ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT