ಶನಿವಾರ, ಸೆಪ್ಟೆಂಬರ್ 25, 2021
29 °C

ಸಚಿವರ ಪ್ರಶ್ನೆ ಸಾರ್ವಕಾಲಿಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಕಡಿಮೆ ಎಲ್ಲಿ ಆಗುತ್ತೇರಿ?’ ಎಂದು ಅರಣ್ಯ ಸಚಿವರು ಪ್ರಶ್ನಿಸಿರುವುದರಲ್ಲಿ (ಪ್ರ.ವಾ., ಸೆ. 16) ಸೋಜಿಗವೇನೂ ಇಲ್ಲ! ಬೆಟ್ಟಗುಡ್ಡಗಳನ್ನು ಬಗೆದು ಕಲ್ಲನ್ನೇ ನುಂಗುತ್ತಿರುವುದು ದೈತ್ಯ ವನ್ಯಜೀವಿಗಳಲ್ಲವೇ?‌ ನದಿಪಾತ್ರದಲ್ಲಿ ಮರಳು ಬಗೆಯುತ್ತಿರುವುದೇನು ಸಾಮಾನ್ಯ ಜೀವಿಯೇ? ರಸ್ತೆ, ಸರ್ಕಾರಿ ಕಟ್ಟಡ, ಕಾಂಪೌಂಡುಗಳ ನಿರ್ಮಾಣ ಕಾರ್ಯದಲ್ಲಿ ಕಬ್ಬಿಣ, ಸಿಮೆಂಟು, ಇಟ್ಟಿಗೆಗಳನ್ನೆಲ್ಲಾ ಕಬಳಿಸುತ್ತಿರುವುವು ಯಾವ ಕಾಡುಪ್ರಾಣಿಗಳಿಗೇನು ಕಮ್ಮಿಯೇ? ಈ ಲೆಕ್ಕಾಚಾರದಲ್ಲಿ ಮಾತ್ರ ಸಚಿವರ ಪ್ರಶ್ನೆ ಸಕಾಲಿಕ, ಸಾರ್ವಕಾಲಿಕ!

-  ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು