ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಹಣ್ಣುಗಳ ಉಪಯೋಗ ಹೀಗೂ ಇರಲಿ

Last Updated 31 ಮೇ 2020, 20:00 IST
ಅಕ್ಷರ ಗಾತ್ರ

ಈ ದಿನಗಳಲ್ಲಿ ಬಿಸಿಲಿನ ಬೇಗೆಯನ್ನು ನೀಗಿಸಿಕೊಳ್ಳಲು ಅನೇಕ ಹಣ್ಣುಗಳನ್ನು ಉಪಯೋಗಿಸುತ್ತಿದ್ದೇವೆ. ಬರೀ ಹಣ್ಣು ತಿನ್ನುವುದಲ್ಲದೆ ಇನ್ನೊಂದು ಉಪಯುಕ್ತ ಕೆಲಸವನ್ನೂ ಮಾಡಬಹುದು. ಹಣ್ಣಿನ ತಿರುಳನ್ನು ತಿಂದು ಅದರ ಬೀಜವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೆಡೆ ಒಣಗಿಸಿ ಸಂಗ್ರಹಿಸಬೇಕು. ಮಳೆಗಾಲ ಆರಂಭವಾಗಿ ಒಂದೆರಡು ಮಳೆ ಬಿದ್ದ ನಂತರ ಈ ಬೀಜಗಳನ್ನು ಮಣ್ಣು ಮತ್ತು ಗೊಬ್ಬರ ಬೆರೆಸಿ ಬೀಜದುಂಡೆಗಳನ್ನಾಗಿ ಮಾಡಬೇಕು. ನಂತರ ಪೊದೆಗಳು, ಬಳ್ಳಿಗಳು, ಮುಳ್ಳಿನ ಕಂಟಿಗಳು ಇರುವ ಕಡೆ ಬೀಜದುಂಡೆಗಳನ್ನು
ಹಾಕಬೇಕು.

ಸೂಕ್ತ ಹವಾಗುಣ ಮತ್ತು ನೈಸರ್ಗಿಕ ಬೇಲಿಯ ರಕ್ಷಣೆಯಿಂದಾಗಿ ಬೀಜಗಳು ಮೊಳಕೆಯೊಡೆದು ಸಸಿಗಳು ಬೆಳೆದು ದೊಡ್ಡವಾಗುತ್ತವೆ. ಇವು ಕಾಲಾಂತರದಲ್ಲಿ ಮರಗಳಾಗಿ ಬೆಳೆಯಲೂಬಹುದು. ಇಂತಹ ಉತ್ತಮ ಕಾಯ೯ ಮಾಡಲು ಬಿಡಿಗಾಸಿನ ಖಚಿ೯ಲ್ಲ. ಸ್ವಲ್ಪ ತಾಳ್ಮೆ ಮತ್ತು ಮುತುವರ್ಜಿ ವಹಿಸಿದರೆ ಇಂತಹ ಅದ್ಭುತ ಕೆಲಸವನ್ನು ಮಾಡಬಹುದು. ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜ ಇರುವುದರಿಂದ ಮನೆಯಲ್ಲಿರುವ ಮಕ್ಕಳಿಗೆ ಇಂತಹ ಕೆಲಸಗಳನ್ನು ಕಲಿಸಬೇಕು. ಇದರಿಂದ ಅವರಲ್ಲಿಯೂ ಪರಿಸರಪ್ರೇಮ ಜಾಗೃತವಾಗುತ್ತದೆ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT