ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ

ಸೋಮವಾರ, ಮೇ 27, 2019
33 °C

ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ

Published:
Updated:

ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ

‘ನೀಟ್’ ಬರೆಯುವವರು ಮೂಗುತಿ, ತುಂಬುತೋಳಿನ ಅಂಗಿ, ಶೂ ಧರಿಸಬಾರದು ಎಂಬ ನಿಯಮ ಹಾಸ್ಯಾಸ್ಪದವಾಗಿದೆ. ಮೂಗುತಿಯಲ್ಲಿ ಸಾಧನವನ್ನು ಇರಿಸಿಕೊಂಡು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರ ಕಣ್ಣು ತಪ್ಪಿಸಿ ಕಾಪಿ ಹೊಡೆಯಲು ಸಾಧ್ಯವೇ? ‘ಕಾಮೆಡ್‌– ಕೆ’ ನಿಯಮವೊಂದಂತೂ ಅಮಾನವೀಯವಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೊಠಡಿಯಿಂದ ಯಾವುದೇ ಕಾರಣಕ್ಕೂ ತಾತ್ಕಾಲಿಕವಾಗಿ ಹೊರಹೋಗುವಂತಿಲ್ಲ. ಹಾಗೇನಾದರೂ ಹೋಗಲು ಯತ್ನಿಸಿದರೆ
ವಜಾ ಮಾಡಲು ಇದನ್ನೂ ಒಂದು ಕಾರಣವನ್ನಾಗಿ ಪರಿಗಣಿಸಲಾಗುವುದು ಎನ್ನುತ್ತದೆ ಈ ನಿಯಮ. ಅಂದರೆ, ಸುಮಾರು ಮೂರೂವರೆ ಗಂಟೆಗಳ ಕಾಲ ವಿದ್ಯಾರ್ಥಿಯು ಮೂತ್ರಾಲಯಕ್ಕೂ ಹೋಗುವಂತಿಲ್ಲ!

ಇಂತಹ ವಿವೇಕಹೀನ ನಿಯಮಗಳಿಂದ ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಕುಂದು ಮತ್ತು ಮನಸ್ಸಿಗೆ ಹಿಂಸೆ. ಅಷ್ಟೇ ಅಲ್ಲ, ಇವು ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು, ಸಂವಿಧಾನ ವಿರೋಧಿಯೂ ಹೌದು.

-ಎಂ.ಎಸ್.ಅಲ್ಲಮಪ್ರಭು, ಬೆಂಗಳೂರು 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !