ಶುಕ್ರವಾರ, ಜನವರಿ 24, 2020
28 °C

ದೇವರ ಮೊರೆ...!?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಮುಜರಾಯಿ ಇಲಾಖೆಯು ಅನುದಾನವನ್ನು ಮರುಹಂಚಿಕೆ ಮಾಡಿ, ಆಡಳಿತಾರೂಢ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಡಮಾಡಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 19). ದೇವರಿಗೆ ಹಣ ಹಂಚಿಕೆಯಲ್ಲೂ ‘ರಾಜಕೀಯ’! ಇಲ್ಲಿ ಅನುದಾನ ಪಡೆಯದ ದೇವಳದ ದೇವರೇ ಸತ್ಯವಂತ. ಏಕೆಂದರೆ ಆ ದೇವರುಗಳಿಗೆ ‘ರಾಜಕೀಯ’ದ ಹಂಗಿಲ್ಲ ತಾನೆ? ಓ ದೇವ ಕ್ಷಮಿಸು. ಮೊರೆ ಇಟ್ಟಾಗ ಆಶೀರ್ವದಿಸುವ ನಿನಗೇ ಇಂತಹ ಅವಸ್ಥೆ! ನೀನಾರಲ್ಲಿ ಮೊರೆ ಇಡುವೆಯೋ? 

ನಗರ ಗುರುದೇವ್ ಭಂಡಾರ್ಕರ್, ಹೊಸನಗರ
 

ಪ್ರತಿಕ್ರಿಯಿಸಿ (+)