ಜನರ ಸಂವಾದಕ್ಕೆ ಜೀವ ತುಂಬಲಿ

ಬಹುತೇಕ ಎಲ್ಲ ರಾಜಕಾರಣಿಗಳು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಸಕ್ರಿಯತೆಯು ಹೆಚ್ಚಿನ ಸಂದರ್ಭ
ಗಳಲ್ಲಿ ಏಕಪಕ್ಷೀಯವಾಗಿರುತ್ತದೆ. ತಮ್ಮ ಘೋಷಣೆ, ಕಾರ್ಯಕ್ರಮಗಳ ವರದಿ, ಸ್ವಪ್ರಚಾರಕ್ಕೆ ಸೀಮಿತವಾಗಿರುವುದು ವಿಷಾದನೀಯ. ಸಾಮಾಜಿಕ ಮಾಧ್ಯಮವು ಜನರೊಂದಿಗೆ ನೇರ ಸಂವಾದ ನಡೆಸಲು ಸೂಕ್ತ ವೇದಿಕೆಯಾಗಿದೆ. ನಾಗರಿಕರು ಕೇಳುವ ಪ್ರಶ್ನೆ, ನೀಡುವ ಸಲಹೆ, ವ್ಯಕ್ತಪಡಿಸುವ ಅಸಮಾಧಾನಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಜನರ ಧ್ವನಿಗೆ ಪ್ರತಿಧ್ವನಿ ನೀಡುವ ನೀತಿಯುತ ಬದ್ಧತೆ ಇಲ್ಲದಿದ್ದರೆ, ಈ ಖಾತೆಗಳ ಅಸ್ತಿತ್ವವೇ ಅರ್ಥಹೀನ.

⇒ಜಿ. ನಾಗೇಂದ್ರ ಕಾವೂರು, ಸಂಡೂರು

ವೈಜ್ಞಾನಿಕ ದರ: ಕಬ್ಬು ಬೆಳೆಗಾರರ ಪಟ್ಟು

ಕಬ್ಬಿನ ಹಂಗಾಮು ಶುರುವಾಗುತ್ತಿದೆ. ಆದರೆ, ಇನ್ನೂ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು, ವೈಜ್ಞಾನಿಕವಾಗಿ ದರ ನಿಗದಿಗೆ ಮುಂದಾಗಿಲ್ಲ. ಕಬ್ಬು ನಂಬಿದ ರೈತರು ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ನಾಟಿಯಿಂದ ಹಿಡಿದು ಕಾರ್ಖಾನೆಗಳಿಗೆ ಸಾಗಿಸುವವರೆಗೂ ರೈತರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇತ್ತೀಚೆಗೆ ಕಬ್ಬು ಕೃಷಿ ವೆಚ್ಚವೂ ಏರಿಕೆ ಕಂಡಿದೆ. ಆದರೆ, ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಬಾಕಿ ಮೊತ್ತ, ತೂಕ ವ್ಯತ್ಯಾಸ ಹಾಗೂ ದರ ವಂಚನೆ ಮೂಲಕ ಬೆಳೆಗಾರರ ಜೀವ ಹಿಂಡುತ್ತಿರುವ ಸಕ್ಕರೆ ಉದ್ಯಮಿಗಳಿಗೆ ಸರ್ಕಾರವು ಲಗಾಮು ಹಾಕಬೇಕಿದೆ. ಆದರೆ, ಇದಕ್ಕೆ ಪೂರಕವಾದ ನೀತಿ ರೂಪಿಸಬೇಕಾದ ಸರ್ಕಾರವು ಭರವಸೆಗಳಲ್ಲೇ ಮುಳುಗಿರುವುದು ದುರದೃಷ್ಟಕರ. ಹಾಗಾಗಿ, ‘ಕಬ್ಬು ಡೊಂಕು ಸಿಹಿಯೂ ಡೊಂಕು’ ಎಂಬ ಮಾತು ಬೆಳೆಗಾರರ ಪಾಲಿಗೆ ಅಕ್ಷರಶಃ ಅನ್ವಯಿಸುತ್ತದೆ.

⇒ಬಾಬು ಶಿರಮೋಜಿ, ಬೆಳಗಾವಿ

ಒಳಮೀಸಲಾತಿ ಗೊಂದಲ ಬಗೆಹರಿಸಿ

ಪ್ರತಿದಿನವೂ ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿದಂತೆ ಹೊಸ ಸುದ್ದಿಗಳು ಪ್ರಕಟವಾಗುತ್ತಿವೆ. ಆದರೆ, ಗೊಂದಲ ಮಾತ್ರ ಇನ್ನೂ ಬಗೆಹರಿದಿಲ್ಲ. ಒಳಮೀಸಲಾತಿಯಲ್ಲಿನ ಅನ್ಯಾಯ ಪ್ರಶ್ನಿಸಿ ಅಲೆಮಾರಿ ಸಮುದಾಯಗಳು ಹೈಕೋರ್ಟ್ನ ಮೆಟ್ಟಿಲೇರಿವೆ. ಎರಡು ಆಯೋಗ ರಚಿಸಿದರೂ ಸರ್ಕಾರಕ್ಕೆ ನ್ಯಾಯ
ಸಮ್ಮತವಾಗಿ ಪರಿಶಿಷ್ಟರಿಗೆ ಮೀಸಲಾತಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಹೊಸ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಲಕ್ಷಾಂತರ
ಉದ್ಯೋಗಾಕಾಂಕ್ಷಿಗಳು ತೊಂದರೆಗೆ ಸಿಲುಕುವಂತಾಗಿದೆ. ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು, ಒಳಮೀಸಲಾತಿಗೆ ಸಂಬಂಧಿಸಿದ ಗೊಂದಲಗಳನ್ನು ತ್ವರಿತವಾಗಿ ಬಗೆಹರಿಸಬೇಕಿದೆ.

⇒ಸಿದ್ಧಾರ್ಥ ಪವಾರ, ಹಾವೇರಿ

ಬೇಜವಾಬ್ದಾರಿಗೆ ಹೊಣೆ ಯಾರು?

ಕೆಟ್ಟ ಗಾಳಿ, ಹದಗೆಟ್ಟ ರಸ್ತೆ, ಕಲುಷಿತ ನೀರು, ಆರೋಗ್ಯ ಸೌಲಭ್ಯದ ಕೊರತೆ... ಇವೆಲ್ಲಾ ಭಾರತದ ಪ್ರಜಾಪ್ರಭುತ್ವದ ಕಪ್ಪುಚುಕ್ಕೆಗಳು. ಜನರು ತಮ್ಮ
ಜೀವನೋಪಾಯಕ್ಕಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೋ ಕಾರ್ಯನಿರತವಾಗಿ ಉಸಿರಾಡುತ್ತಿದ್ದಾರೆ. ನಗರೀಕರಣದ ತೀವ್ರಗತಿ ಬೆಳವಣಿಗೆಯು ನಮ್ಮ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಜನರನ್ನು ಏಕಾಂತದ ಛಾಯೆಯಲ್ಲಿ ಇರಿಸುವ ಮೂಲಕ ದುರ್ಬಲರನ್ನಾಗಿಸಿದೆ. ಎಲ್ಲದಕ್ಕೂ ಹೊಂದಿಕೊಳ್ಳುವಂತೆ ಮಾಡುತ್ತಿದೆ. ಪ್ರಶ್ನೆಯಿಲ್ಲದ ಹೊಂದಾಣಿಕೆಯಿಂದಾಗಿ ಪ್ರಜಾಪ್ರಭುತ್ವದ ಅಂತ್ಯ ಆರಂಭವಾಗಿದೆಯೇನೊ ಎಂಬ ಭೀತಿ ಕಾಡುತ್ತಿದೆ. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಮಾತ್ರವಲ್ಲ, ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ಇರುವ ಗಟ್ಟಿಯಾದ ಜವಾಬ್ದಾರಿಯುತ ಆಯುಧ. ಸಮಸ್ಯೆಗಳಿಗೆ ಯಾರೂ ಉತ್ತರಿಸುವ ಉಮೇದಿ
ನಲ್ಲಿಲ್ಲ. ಇದರ ಹೊಣೆ ಯಾರು ಹೊರಬೇಕು?

⇒ಕೆ.ಎಂ. ಹನುಮಾನ್, ಬೆಂಗಳೂರು

ಕಾಲ್ತುಳಿತ: ಗೃಹ ಸಚಿವಾಲಯದ ನಿರ್ಲಕ್ಷ್ಯ

ದೇಶದಲ್ಲಿ ಒಂದರ ಮೇಲೊಂದು ಕಾಲ್ತುಳಿತ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗೃಹ ಸಚಿವಾಲಯಗಳು ನೀಡುವ ಘಟನೋತ್ತರ ಪ್ರತಿಕ್ರಿಯೆಗಳು, ‘ತೀರಾ ಹಳಸಲು’ ಎನಿಸುತ್ತವೆ. ಬಹುತೇಕ ಪ್ರಕರಣಗಳಲ್ಲಿ ಆಯೋಜಕರ ನಿರ್ಲಕ್ಷ್ಯತನ ಎದ್ದು ಕಾಣುತ್ತದೆ. ಯಾವುದೇ ಸಿದ್ಧತೆ ಪರಿಶೀಲಿಸದೆ ಅನುಮತಿ ನೀಡುವ ಗೃಹ ಇಲಾಖೆಯ ಕೆಟ್ಟಚಾಳಿಯಿಂದಾಗಿ ಸಾವು–ನೋವು ಸಂಭವಿಸುತ್ತಿವೆ. ಪ್ರಭುತ್ವದ ಸಂಜ್ಞೆಯಲ್ಲೇ ಕಾರ್ಯ ನಿರ್ವಹಿಸುವ ಗೃಹ ಇಲಾಖೆಯು ಕಠಿಣವಾದ ನೀತಿ ನಿರೂಪಣೆ ಇಲ್ಲದೇ ಬಳಲುತ್ತಿದೆ ಎಂಬುದಕ್ಕೆ ಇಂತಹ ಪ್ರಕರಣಗಳೇ ನಿದರ್ಶನ.

⇒ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.