ರಾಹುಲ್ ರೌದ್ರಾವತಾರಕ್ಕೆ ನಾಗರಿಕರು ಋಣಿ!

ಜಾಹೀರಾತು ಎಂದರೆ ಏನು ಬೇಕಾದರೂ ತೋರಿಸಬಹುದೇ? ಜಾಹೀರಾತಿನಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳಿಗಾದರೂ ಸಾಮಾನ್ಯ ಜ್ಞಾನ, ಸಾಮಾಜಿಕ ಹೊಣೆಗಾರಿಕೆ ಎಂಬುದು ಇರುವುದಿಲ್ಲವೇ? ‘ನಾನು ಗೂಂಡಾ’ ಎಂದು ರಾಹುಲ್ ದ್ರಾವಿಡ್ ಅವರು ಅಬ್ಬರಿಸುವ ಒಂದು ಜಾಹೀರಾತಿನ ಸುದ್ದಿ ವೈರಲ್ ಆಗಿದೆಯಂತೆ (ಪ್ರ.ವಾ., ಏ. 11).

ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡ ಈ ಸೆಲೆಬ್ರಿಟಿ ರೌದ್ರಾವತಾರ ತಾಳಿ, ಅಬ್ಬರಿಸಿ, ತಮ್ಮ ಕೈಯಲ್ಲಿನ ಬ್ಯಾಟ್ ಬೀಸಿ ಕಾರೊಂದರ ಗಾಜನ್ನು ಕುಟ್ಟಿ ಪುಡಿ ಮಾಡುವ ದೃಶ್ಯ ಇದು. ಅಭಿನಯ ಚೆನ್ನಾಗಿದೆಯಂತೆ. ಇದರ ಪರಿಕಲ್ಪನೆ ಮಾಡಿದವರಿಗೂ ನಿರ್ದೇಶಕರಿಗೂ ವಿಶೇಷವಾಗಿ ‘ಪ್ರಚಂಡ’ವಾಗಿ ನಟಿಸಿರುವ ದ್ರಾವಿಡ್ ಅವರಿಗೂ ಜಗತ್ತಿನ ನಾಗರಿಕರು ಋಣಿಯಾಗಿರಬೇಕಲ್ಲವೇ?!

ಅವರು ಜಾಹೀರು ಮಾಡಿರುವ ಸಂದೇಶದ ಪ್ರಕಾರ- ಇನ್ನು ಎಲ್ಲಿಯೇ ಆದರೂ ಟ್ರಾಫಿಕ್ ಜಾಮ್ ಆದರೆ ತಕ್ಷಣವೇ ನಿಮ್ಮ ಬ್ಯಾಟ್ ಅಥವಾ ದೊಣ್ಣೆ ಬೀಸಿ ಪಕ್ಕದ ಯಾರದೋ ಕಾರನ್ನು ಚಚ್ಚಿ ‘ನಾನು ಗೂಂಡಾ’ ಎಂದು ಕೈ ಎತ್ತಿ ಅಬ್ಬರಿಸಿರಿ; ಯಾರಾದರೂ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಲೈಕ್ ಗಿಟ್ಟಿಸಲಿ!

- ಡಾ. ಟಿ.ಗೋವಿಂದರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.