ವಿವಿಧ ವಲಯಗಳ ಹೆಚ್ಚಿನ ಕಾರ್ಮಿಕರು ಸ್ವಯಂಪ್ರೇರಿತರಾಗಿ ರಜೆಯಲ್ಲಿದ್ದಾರೆ. ಆದರೆ, ನಿರಂತರವಾಗಿ ರಸ್ತೆಗಳ ಕಸ ಬಳಿಯುತ್ತ, ಮನೆಮನೆಗಳಿಂದ ಕಸ ಸಂಗ್ರಹಿಸುತ್ತ, ಯಾವ ವೈರಸ್ಗೂ ಹೆದರದೆ ಕೆಲಸ ಮಾಡುತ್ತಿರು
ವವರು ಪೌರಕಾರ್ಮಿಕರು. ಕಸ ಸಂಗ್ರಹಕ್ಕಾಗಿ ನಮ್ಮ ಮನೆ ಬಳಿ ಬಂದ ಇವರ ಕೈಗಳಿಗೆ ಕೈಗವಸು ಇರಲಿಲ್ಲ. ಕೆಲವರಿಗೆ ಮಾಸ್ಕ್ ಕೂಡ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಇವರಿಗೆ ಈ ತುರ್ತಿನ ಪರಿಸ್ಥಿತಿಯಲ್ಲೂ ಇಂಥ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಅನ್ನುವುದು ತಿಳಿಯಿತು. ‘ಸೋಪ್ ಕೊಡಿ ಅಂತ ನಾವು ಕೇಳಿ ಕೇಳಿ ಸಾಕಾಯ್ತು, ಯಾರೂ ಕೇರ್ ಮಾಡ್ತಿಲ್ಲ ಅಮ್ಮ’ ಅಂತಾರೆ ಇವರು.

ಯಾಕೆ ಇಂಥ ನಿರ್ಲಕ್ಷ್ಯ? ‘ಪೌರಕಾರ್ಮಿಕರ ಕೆಲಸಕ್ಕೆ ಕಿಟಕಿ ಪಕ್ಕ ನಿಂತು, ಚಪ್ಪಾಳೆ ತಟ್ಟಿ’ ಎಂದು ಸಲಹೆ ಕೊಡುವ ಸರ್ಕಾರ, ಪೌರಕಾರ್ಮಿಕರ ಸುರಕ್ಷೆಗೆ ಯಾವ್ಯಾವ ಕ್ರಮ ಕೈಗೊಂಡಿದೆ? ಕೊರೊನಾಕ್ಕೆ ಹೆದರಿ ಸರ್ವರೂ ಮನೆಯಲ್ಲಡಗಿ ಕೂತಿರುವಾಗ, ಜೀವದ ಭಯವನ್ನು ಲೆಕ್ಕಿಸದೆ ಕಸ ಬಳಿಯುವ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿರುವ ಪೌರ
ಕಾರ್ಮಿಕರಿಗೆ ಹಿಂದೆಂದಿಗಿಂತಲೂ ಹೆಚ್ಚಿನ, ವಿಶೇಷ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಅವರ ಸಂಬಳ ವನ್ನೂ ಹೆಚ್ಚಿಸುವ ಕಡೆ ಸರ್ಕಾರ ಗಮನಕೊಡಬೇಕು. ನಾಗರಿಕರು ಎನಿಸಿಕೊಂಡವರೆಲ್ಲರೂ ಈ ಬಗ್ಗೆ ಸರ್ಕಾರವನ್ನು ಒತ್ತಾಯಪೂರ್ವಕವಾಗಿ ಪ್ರಶ್ನಿಸಬೇಕಿದೆ.

ಚರಿತಾ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.