ಶುಕ್ರವಾರ, ಏಪ್ರಿಲ್ 10, 2020
19 °C

ಬೇಕಾಗಿದೆ ಯುದ್ಧೋಪಾದಿಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಹುಟ್ಟಿಗೆ ಕಾರಣವಾದ ಚೀನಾದಲ್ಲಿ ಅದನ್ನು ನಿರ್ನಾಮ ಮಾಡಲು ಇಡೀ ದೇಶವೇ ಒಂದಾಗಿ ಕೆಲಸ ಮಾಡುತ್ತಿದೆ. ಕೇವಲ ಹತ್ತೇ ದಿನಗಳಲ್ಲಿ ಬಹುದೊಡ್ಡ ಆಸ್ಪತ್ರೆಯೊಂದನ್ನು ಕಟ್ಟಿ, ರೋಗಿಗಳಿಗೆ ಶುಶ್ರೂಷೆ ನೀಡಲಾಯಿತು. ಅಲ್ಲಿಯ ವೈದ್ಯರಿಗೆ ನೀಡಿರುವ ಸಲಕರಣೆಗಳ ಶೇಕಡ ಹತ್ತರಷ್ಟೂ ನಮ್ಮ ದೇಶದ ವೈದ್ಯರಿಗೆ ಇಲ್ಲ. ಸ್ವತಃ ವೈದ್ಯರಿಗೇ ಈ ವೈರಸ್ ತಗುಲದಂತೆ ಮಾಡಲು ಬೇಕಾಗಿರುವ ದಿರಿಸುಗಳು ಇಲ್ಲ. ಕೆಲವೆಡೆ ಕೋವಿಡ್‌– 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಸೋಂಕುಪೀಡಿತರಾಗಿರುವುದು ಕಂಡುಬಂದಿದೆ. ಹೀಗಾಗಿ, ಇಂತಹ ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಹರೀಶ್ ಹಾಳದಕಟ್ಟಾ, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)