ಶನಿವಾರ, ಮೇ 8, 2021
26 °C

ಈ ಬಾರಿಯೂ ಗೊಂದಲಮಯ ನಿರ್ಧಾರ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಈ ಬಾರಿಯೂ ಗೊಂದಲಮಯ ನಿರ್ಧಾರ

ಒಂದು ವರ್ಷದ ಕೊರೊನಾ ಪರಿಣಾಮದ ಅನುಭವದ ನಡುವೆಯೂ ಚುನಾವಣಾ ಪ್ರಚಾರಕ್ಕೆ ಮುಕ್ತವಾಗಿ ಅವಕಾಶ ಕೊಟ್ಟು, ಇನ್ನಿತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿ, ಜನರ ಓಡಾಟ ವಿರಳವಾಗಿರುವ ಸಮಯದಲ್ಲಿ ಅನಗತ್ಯವಾಗಿ ರಾತ್ರಿ ಕರ್ಫ್ಯೂ ಹೇರಿದರೆ ಏನು ಪ್ರಯೋಜನ? ಕಳೆದ ಬಾರಿಯೂ ಇದೇ ರೀತಿಯ ಗೊಂದಲಮಯ, ಗೋಜಲು ನಿರ್ಧಾರಗಳು.

ಒಂದೆಡೆ ಆರ್ಥಿಕತೆ ಈಗಷ್ಟೇ ಪುನಶ್ಚೇತನಗೊಳ್ಳುತ್ತಿದ್ದರೆ ಮತ್ತೊಂದೆಡೆ ಎಷ್ಟೋ ಮಂದಿಗೆ ಕೊರೊನಾ ಸಂದರ್ಭವು ಒಂದು ದಂಧೆಯಂತೆಯೇ ಭಾಸವಾಗುತ್ತಿದೆ. ರಾತ್ರಿ ಕರ್ಫ್ಯೂ ತೆಗೆದುಹಾಕುವುದು ಒಳಿತು. ಕೋವಿಡ್‌ ಮಾರ್ಗಸೂಚಿ ಪಾಲನೆ, ಜಾಗೃತಿ ಮೂಡಿಸುವಿಕೆ ಮತ್ತು ಲಸಿಕೆ ನೀಡಿಕೆ... ಇವು ಮಾತ್ರ ಪರಿಹಾರೋಪಾಯಗಳು.

- ರವಿಕುಮಾರ್ ಎನ್., ಮೈಸೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.