ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಲಾಕರ್!

Last Updated 15 ಮೇ 2019, 15:54 IST
ಅಕ್ಷರ ಗಾತ್ರ

ಮನೆಯ ತಾರಸಿ ಮೇಲೆ ಸಂಗ್ರಹಿಸಿ ಇಟ್ಟಿದ್ದ ನೀರನ್ನು ಕದಿಯಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿರುವ ಪ್ರಕರಣ ನಾಸಿಕ್‌ನಲ್ಲಿ ನಡೆದಿದೆ (ಪ್ರ.ವಾ., ಮೇ 14). ಇದು ಹಾಸ್ಯಾಸ್ಪದ ಎನಿಸಿದರೂ, ಚರ್ಚೆಯ ಮುನ್ನೆಲೆಗೆ ಬರಬೇಕಾದ ವಿಚಾರ.

ಬರದ ಭೀಕರತೆ ನೀರನ್ನು ಕದಿಯುವ ಮಟ್ಟಕ್ಕೆ ಬಂದಿದೆ ಎಂದರೆ, ನೀರಿನ ಅಭಾವ ಎಷ್ಟಿದೆ ಎಂಬುದು ತಿಳಿಯುತ್ತದೆ. ನೀರನ್ನು ವಿನಾಕಾರಣ ಪೋಲು ಮಾಡುವವರು ಇದನ್ನು ಮನದಟ್ಟು ಮಾಡಿಕೊಳ್ಳಬೇಕು.

ಬರದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಬೆಲೆಬಾಳುವ ವಸ್ತುಗಳಿಗೆ ಭದ್ರತೆ ನೀಡುವ ನಾವು, ನೀರಿಗೂ ಲಾಕರ್ ವ್ಯವಸ್ಥೆ ಮಾಡಿಸಬೇಕಾದ ಸಂದರ್ಭ ಮುಂದಿನ ದಿನಗಳಲ್ಲಿ ಬರಬಹುದು. ನೀರಿನ ಮಹತ್ವ ಅರಿತು ಹನಿಹನಿ ನೀರನ್ನೂ ಎಚ್ಚರಿಕೆಯಿಂದ ಉಪಯೋಗಿಸಬೇಕು. ಕಳೆದ ವರ್ಷದ ಜಲ ದಿನದ ಘೋಷವಾಕ್ಯ ‘ನೀರಿಗಾಗಿ ನಿಸರ್ಗ’ ಎಂದಿತ್ತು. ಇದು ಮುಂದೆ ‘ನೀರಿಗಾಗಿ ಲಾಕರ್’ ಎಂದು ಬದಲಾಗುವಂತೆ ಆಗಬಾರದು.

- ಯೋಗೇಶ್ ವೈ.ಸಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT