ಪಾತಿವ್ರತ್ಯದ ಮಾತೇಕೆ?

7

ಪಾತಿವ್ರತ್ಯದ ಮಾತೇಕೆ?

Published:
Updated:

‘ಪತ್ರಿಕಾ ಸ್ವಾತಂತ್ರ್ಯದ ಪಾತಿವ್ರತ್ಯಕ್ಕೆ ಭಂಗ ತರುವ ಅನೇಕ ಸಂದರ್ಭಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಇದು ಸ್ವತಃ ಪತ್ರಕರ್ತರ ಪಾತಿವ್ರತ್ಯ ಭಂಗಕ್ಕೆ ಅವಕಾಶ ನೀಡಿದಂತೆ’ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿರುವುದಾಗಿ ವರದಿಯಾಗದೆ (ಪ್ರ.ವಾ., ಜುಲೈ 8). ಅದನ್ನು ಓದಿ ಆಘಾತವಾಯಿತು.

ಪತ್ರಿಕಾರಂಗದಲ್ಲಿನ ಒಳಿತು– ಕೆಡುಕಿನ ಮಟ್ಟವನ್ನು ನಿರ್ಧರಿಸಲು ಹೆಣ್ಣಿನ ಶೀಲವನ್ನೇ ಅಳತೆಗೋಲನ್ನಾಗಿಬಳಸಿರುವ ಮಾತುಗಳು ವೈಚಾರಿಕ ನೆಲೆಯಿಂದ ಬಂದವುಗಳಲ್ಲ; ಇದು ಹೆಣ್ಣಿನ ವ್ಯಕ್ತಿತ್ವವನ್ನು ಲೈಂಗಿಕ ಕಟ್ಟುಪಾಡುಗಳ ಶೀಲದ ಚೌಕಟ್ಟಿನಲ್ಲಿಯೇ ನಿಯಂತ್ರಿಸಿರುವ ಮತ್ತು ನಿರ್ದೇಶಿಸುತ್ತಿರುವ ‘ಗಂಡು ಕಟ್ಟಿದ ನುಡಿ’ (ಮ್ಯಾನ್ ಮೇಡ್ ಲಾಂಗ್ವೇಜ್) ಆಗಿದೆ.

–ಸಿ.ಪಿ. ನಾಗರಾಜ, ಬೆಂಗಳೂರು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !