ಮಂಗಳವಾರ, ಅಕ್ಟೋಬರ್ 20, 2020
25 °C

ಬಂದ್‌ಗೆ ಮುಕ್ತಿ ಎಂದು?

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಸೋಮವಾರ ಕರ್ನಾಟಕ ಬಂದ್ ನಡೆದಿದೆ. ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಆದರೆ ಬಂದ್‌ನಿಂದ ತೊಂದರೆಗೆ ಒಳಗಾಗುವುದು ಯಾವ ವರ್ಗದ ಜನ ಎಂಬುದನ್ನು ಬಂದ್‌ಗೆ‌ ಕರೆ ಕೊಡುವವರು ಯೋಚಿಸಬೇಕು. ಬಂದ್, ರಸ್ತೆತಡೆ ಎಂಬ ಪಿಡುಗುಗಳು ನಮ್ಮಲ್ಲಿ ರೂಢಿಗತ ಆಗಿರುವುದು ಬಹಳ ಬೇಸರ ಉಂಟುಮಾಡುವ ಸಂಗತಿ.

ಬಂದ್ ಬದಲಿಗೆ ಶಾಂತಿಯುತ ಧರಣಿ ನಡೆಸಲು ಸಾಧ್ಯವಿಲ್ಲವೇ? ಈ ಮುಖಾಂತರ ಸರ್ಕಾರದ ಗಮನ ಸೆಳೆಯಲು ಆಗದೇ? ಕೊರೊನಾ ಮಾಡಿರುವ ದೊಡ್ಡ ಗಾಯವೇ ಸಾಕು. ಆ ಗಾಯದ ಮೇಲೆ ಇಂತಹ ಬಂದ್‌ಗಳಿಂದ ಮತ್ತೆ ಮತ್ತೆ ಬರೆಗಳು ಬೀಳುವುದು ಬೇಡ. ತಳ್ಳುಗಾಡಿ, ಆಟೊ, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಜನಸಾಮಾನ್ಯರ ದಿನದ ಜೀವನವನ್ನು ಅಸ್ತವ್ಯಸ್ತಗೊಳಿಸುವ ಬಂದ್‌ಗೆ ಮುಕ್ತಿ ಎಂದು?

ಸೋಹನ್ ಎಸ್.ಪಿ., ದಾವಣಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.