ಶುಕ್ರವಾರ, ನವೆಂಬರ್ 27, 2020
19 °C

ನಿಘಂಟು ದೋಷಕ್ಕೆ ಹೊಣೆ ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ಸಂಕ್ಷಿಪ್ತ ಕನ್ನಡ ನಿಘಂಟು’ 12ನೇ ಆವೃತ್ತಿಯ ಒಂದು ಲಕ್ಷ ಪ್ರತಿಗಳನ್ನು ಪ್ರಕಟಿಸಿದ್ದು, ಇದು 1,440 ಪುಟಗಳನ್ನು ಹೊಂದಿದೆ. ನಿಘಂಟು ಪುಟ ಸಂಖ್ಯೆಗಳು ಹಾಗೂ ಶಬ್ದಗಳು ಕ್ರಮದಲ್ಲಿರದೆ ಅಡ್ಡಾದಿಡ್ಡಿಯಾಗಿವೆ. ಕೆಲವು ಪುಟ ಸಂಖ್ಯೆಗಳೇ ಮಾಯವಾಗಿವೆ. ಇದನ್ನು ನೋಡಿ ಬೇಸರವಾಯಿತು.

ನಿಘಂಟು ಪುಟ ಸಂಖ್ಯೆ 1ರಿಂದ 80ರವರೆಗೆ ಕ್ರಮವಾಗಿವೆ. 80ರ ನಂತರ ಎದುರಿನ ಪುಟ 81 ಬಾರದೆ 157ನೇ ಪುಟ ಪ್ರಕಟವಾಗಿದೆ. ಅದರ ಹಿಂದಿನ ಪುಟ 82 ಬಂದಿದೆ. ಇದೇ ರೀತಿ ಹಲವಾರು ಪುಟ ಸಂಖ್ಯೆಗಳು ಪೂರಕವಲ್ಲದ ರೀತಿಯಲ್ಲಿವೆ. ಪುಟ 80ರಿಂದ 113ರವರೆಗಿನ 33 ಪುಟಗಳಲ್ಲಿ ಈ ತಪ್ಪುಗಳು ಕಾಣಿಸಿಕೊಂಡಿವೆ. ಸುಮಾರು 22 ಪುಟಗಳು ಕಳೆದುಹೋಗಿವೆ. ಈ ತಪ್ಪು ಪುಸ್ತಕದ ಬೈಂಡಿಂಗ್‌ ಸಂದರ್ಭದಲ್ಲಿ ಆಗಿರದೆ, ಪೇಜ್ ಸೆಟ್ಟಿಂಗ್ ಮತ್ತು ಪ್ರೂಫ್ ತಿದ್ದುವ ವೇಳೆಯಲ್ಲಿಯೇ ಆಗಿರುವುದು ತಿಳಿದುಬರುತ್ತದೆ.

ಈ ದೋಷಪೂರಿತ ನಿಘಂಟಿನ ಲೋಪದ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ? ಲೋಪ ಸರಿಪಡಿಸಿ ಪರಿಷ್ಕೃತ ಮುದ್ರಣವನ್ನು ‘ಸಂಕ್ಷಿಪ್ತ ಕನ್ನಡ ನಿಘಂಟು’ 12ನೇ ಆವೃತ್ತಿಯನ್ನು ಖರೀದಿಸಿದ ಎಲ್ಲರಿಗೂ ಉಚಿತವಾಗಿ ಹಂಚಿಕೆ ಮಾಡುವುದು ಒಳಿತು.

-ಬಸವರಾಜ ಆಕಳವಾಡಿ, ಕೊಪ್ಪಳ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.