ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರಿಗಷ್ಟೇ ನಿಯಮ ಏಕೆ?

Last Updated 28 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಸರ್ಕಾರ ತನ್ನ ನೌಕರರಿಗೆ ಒಂದು ಸಂಪ್ರದಾಯದಂತೆ ಇದೀಗ ನಡತೆ ನಿಯಮದ ಕರಡನ್ನು ಬಿಡುಗಡೆ ಮಾಡಿದೆ. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಬಾರದು, ಅನುಮತಿ ಇಲ್ಲದೆ ಪತ್ರಿಕೆಗಳಿಗೆ ಲೇಖನ ಬರೆಯಬಾರದು, ರಾಜಕೀಯ ಪಕ್ಷದ ಪರ ಕೆಲಸ ಮಾಡಬಾರದು ಎಂಬಂತಹ ಸೂಚನೆಗಳು ಇದರಲ್ಲಿವೆ. ಇವೆಲ್ಲ ಈಗಾಗಲೇ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುವುದೇ ಸರ್ಕಾರಿ ನೌಕರರ ನೇರವಾದ ರಾಜಕೀಯ ಪಕ್ಷ ಚಟುವಟಿಕೆಗಳಿಂದ. ಇವರನ್ನು ಯಾರಾದರೂ ನಿರ್ಬಂಧಿಸಲು ಸಾಧ್ಯವಾಯಿತೇ? ಕೆಲವು ಗಟ್ಟಿಗರು ರಾಷ್ಟ್ರೀಯ ಪಕ್ಷಗಳೊಂದಿಗೆ ನೇರ ಸಂಪರ್ಕವನ್ನೇ ಇರಿಸಿಕೊಂಡಿರುತ್ತಾರೆ.

ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರ ಸಹಾಯಕರಾಗಿ ನೇಮಕವಾಗುವ ಸರ್ಕಾರಿ ನೌಕರರು, ಅಧಿಕಾರಿಗಳು ಪಕ್ಷಾತೀತರಾಗಿದ್ದರೆ ಅವರಿಗೆ ವಿಧಾನಸೌಧದಲ್ಲಿ ಉಳಿಗಾಲವಿರುತ್ತದೆಯೇ? ಮುಖ್ಯವಾಗಿ, ಈಗ ಶಾಸಕರು, ಸಚಿವರೂ ವೇತನ, ಪಿಂಚಣಿ ಪಡೆಯುವ ಮೂಲಕ ಸರ್ಕಾರಿ ನೌಕರರಂತೆಯೇ ಆಗಿದ್ದಾರೆ. ಅವರು ಸಿನಿಮಾದಲ್ಲಿ ನಟಿಸಬಹುದು, ಯಾರನ್ನಾದರೂ ಬೈಯಬಹುದು, ಪಕ್ಷ ರಾಜಕಾರಣವನ್ನೂ ಮಾಡಬಹುದು ಎಂಬುದು ಸಹ ತಪ್ಪಬೇಕಲ್ಲವೇ? ಅವರಿಗಿಲ್ಲದ ನಿಯಮ ಬಡ ನೌಕರರಿಗಷ್ಟೇ ಏಕೆ?

ಟಿ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT