ಗುರುವಾರ , ಸೆಪ್ಟೆಂಬರ್ 19, 2019
29 °C

ಸೆಲೆಬ್ರಿಟಿಗಳಿಗೆ ರಾಜಮರ್ಯಾದೆ ಏಕೆ?

Published:
Updated:

ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ಕ್ಯಾಪ್ಟನ್ ಡೇವಿಡ್ ಬೆಕಂ ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸಿದ್ದಕ್ಕೆ, ಅಲ್ಲಿನ ಸಂಚಾರ ಪೋಲಿಸರು ಆತನ ಚಾಲನಾ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತಿನಲ್ಲಿ ಇಟ್ಟಿದ್ದಾರೆ. ಭಾರತದಲ್ಲಿ ಮಹೇಂದ್ರಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ ಅಥವಾ ಸಚಿನ್‌ ತೆಂಡೂಲ್ಕರ್‌ ಅವರಂತಹ ಸೆಲೆಬ್ರಿಟಿಗಳು ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡರೆ ಅವರಿಗೆ ಈ ರೀತಿ ಶಿಕ್ಷೆ ಆಗಬಹುದೇ?

ಪ್ರಧಾನಿ ನರೇಂದ್ರ ಮೋದಿ ಪಯಣಕ್ಕೆ ನಿಯೋಜನೆಗೊಂಡಿದ್ದ ಹೆಲಿಕಾಪ್ಟರನ್ನು ಇತ್ತೀಚೆಗೆ ತಪಾಸಣೆ ಮಾಡಿದ್ದಕ್ಕಾಗಿ ಒಬ್ಬ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಭಾರತದಲ್ಲಿ ಸೆಲೆಬ್ರಿಟಿಗಳು ತಪ್ಪು ಮಾಡಿ ಸಿಕ್ಕಿಬಿದ್ದರೆ ಅವರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅವರನ್ನು ಬಿಟ್ಟುಬಿಡುತ್ತಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವುದು ಎಷ್ಟೋ ಬಾರಿ ಕಾರ್ಯರೂಪಕ್ಕೆ ಇಳಿಯುವುದಿಲ್ಲ. ನಾವು ವಿದೇಶಗಳಿಂದ ಕಲಿಯಬೇಕಿರುವುದರ ಪಟ್ಟಿಗೆ ಇದನ್ನೂ ಸೇರಿಸಬೇಕು.

- ರಮಾನಂದ ಶರ್ಮಾ, ಬೆಂಗಳೂರು

Post Comments (+)