ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಪಥಿ ಚಿಕಿತ್ಸೆಯ ಹಪಹಪಿ ಏಕೆ?

ಅಕ್ಷರ ಗಾತ್ರ

ಆಯುಷ್‌ ವೈದ್ಯರು ತುರ್ತು ಸಂದರ್ಭಗಳಲ್ಲಿ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ನೀಡಬೇಕೆಂಬ ಡಾ. ಚೇತನಾ ಅವರ ಪತ್ರ (ವಾ.ವಾ., ಮೇ 28) ವಿರೋಧಾಭಾಸದಿಂದ ಕೂಡಿದೆ. ಆಯುರ್ವೇದ ಪದ್ಧತಿಯು ಅತ್ಯಂತ ಪುರಾತನ ಮತ್ತು ಗೌರವಯುತ ವೈದ್ಯ ಪದ್ಧತಿ. ಆಯುರ್ವೇದವನ್ನು ಇಷ್ಟಪಟ್ಟು ಓದಿದವರಿಗೆ ಅಲೋಪಥಿ ಚಿಕಿತ್ಸೆ ನೀಡುವ ಹಪಹಪಿ ಏಕೆ ಎಂಬುದು ಅರ್ಥವಾಗದ ಒಗಟು.

ಸಮ್ಮಿಶ್ರ ವೈದ್ಯ ಪದ್ಧತಿ ಎಂದರೆ ಒಂದೇ ಆಸ್ಪತ್ರೆಯಲ್ಲಿ ಎರಡೂ ವೈದ್ಯ ಪದ್ಧತಿಗಳ ವೈದ್ಯರ ಲಭ್ಯತೆಯೇ ಹೊರತು, ಒಬ್ಬನೇ ವೈದ್ಯ ಎರಡು ಪದ್ಧತಿಗಳಲ್ಲಿ ಚಿಕಿತ್ಸೆ ನೀಡುವುದಲ್ಲ. ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಒಪ್ಪಿಕೊಳ್ಳಬಹುದಾದ ಆಯುಷ್‌ ವೈದ್ಯರು, ಸರ್ಕಾರಿ ಕೆಲಸದಲ್ಲಿ ಮಾತ್ರ ಹೆಚ್ಚಿನ ವೇತನವನ್ನು ನಿರೀಕ್ಷಿಸುವುದು ವಿರೋಧಾಭಾಸವಲ್ಲವೇ?

ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT