ಶುಕ್ರವಾರ, ಅಕ್ಟೋಬರ್ 18, 2019
23 °C

ಹೆಣ್ಣು ಸಬಲೆ, ಆದರೆ...

Published:
Updated:

ಇಂದು ಹೆಣ್ಣು ಅಬಲೆಯಲ್ಲ ಸಬಲೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚಿನ ಕೆಲವು ಘಟನೆಗಳು ತುಂಬಾ ಬೇಸರ ಹಾಗೂ ಆತಂಕ ಉಂಟುಮಾಡುವಂತಿವೆ.

ಗಂಡ ಕೆಲಸಕ್ಕೆ ಹೋಗುತ್ತಿಲ್ಲ ಎಂದು ತಾಯಿಯೊಬ್ಬಳು ಮಗುವನ್ನು ಉಸಿರುಗಟ್ಟಿಸಿ ಸಾಯಿಸುತ್ತಾಳೆ, ಕೌಟುಂಬಿಕ ಕಲಹಕ್ಕೆ ಮನನೊಂದು ಮತ್ತೊಬ್ಬಳು ತಾಯಿ ಮಗುವನ್ನು ನೇಣು ಹಾಕಿ ತಾನೂ ನೇಣು ಹಾಕಿಕೊಳ್ಳುತ್ತಾಳೆ, ಸುಶಿಕ್ಷಿತ ಅವಿವಾಹಿತ ಹುಡುಗಿಯೊಬ್ಬಳು ಸಮಾಜಕ್ಕೆ ಹೆದರಿ ಗರ್ಭಪಾತ ಮಾಡಿಸಿಕೊಳ್ಳಲು ಹೋಗಿ ಸತ್ತಿದ್ದಾಳೆ... ಈ ಎಲ್ಲಾ ಘಟನೆಗಳು ನಡೆದದ್ದು ಎಲ್ಲೋ ದೂರದ ಹಳ್ಳಿಯಲ್ಲಿ ಅಲ್ಲ. ದೊಡ್ಡ ಪಟ್ಟಣ, ನಗರ ಪ್ರದೇಶಗಳಲ್ಲಿ ಎಂಬುದು ಗಮನಿಸಬೇಕಾದ ಸಂಗತಿ.

ಎಷ್ಟೋ ಹೆಣ್ಣುಮಕ್ಕಳು ಸಾಮಾಜಿಕ ವ್ಯವಸ್ಥೆ, ಕೌಟುಂಬಿಕ ವ್ಯವಸ್ಥೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹಾಗೂ ತಮ್ಮ ವೈಯಕ್ತಿಕ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಎಡವುತ್ತಿರುವುದು ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಹಾಗೂ ಸಮಾಜವು ಚಿಂತನೆ ಮಾಡಬೇಕಾಗಿದೆ.

– ಸುರೇಶ ಗೌರೆ, ನವನಿಹಾಳ, ಕಲಬುರ್ಗಿ

Post Comments (+)