ಭಾನುವಾರ, ಸೆಪ್ಟೆಂಬರ್ 26, 2021
24 °C

ಆಗ ಇಲ್ಲದ ಪಟ್ಟು, ಈಗ ಮಾತ್ರ ರಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮ್ಮ ಮಗ ಬಿ.ವೈ.ವಿಜಯೇಂದ್ರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಆಯಕಟ್ಟಿನ ಖಾತೆಯೇ ಬೇಕೆಂದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಪಟ್ಟು ಹಾಕಿರುವುದಾಗಿ ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ, ಈ ರೀತಿಯ ಪಟ್ಟು ಮತ್ತು ಬೆದರಿಕೆಗಳು ಅವರು ಅಧಿಕಾರದಲ್ಲಿದ್ದಾಗ ರಾಜ್ಯದ ಪಾಲಿನ ಜಿಎಸ್‌ಟಿ ಬಾಕಿ ಹಣ ಮತ್ತು ಬರ, ನೆರೆ ವಿಕೋಪಗಳ ಪರಿಹಾರ ಧನವನ್ನು ಕೇಂದ್ರದಿಂದ ತರುವ ವಿಷಯದಲ್ಲಿ ಏಕೆ ಇರಲಿಲ್ಲ? ಕುರ್ಚಿ ಉಳಿಸಿಕೊಳ್ಳಲು ಅವರು ಸೌಮ್ಯರಾಗಿ ಇದ್ದರೇ? ಪಟ್ಟು ಮತ್ತು ಬೆದರಿಕೆಗಳನ್ನು ಜನಹಿತಕ್ಕಾಗಿ ಬಳಸಬೇಕು. ಸ್ವಹಿತಕ್ಕಾಗಿ ಮಾಡುವುದು ಸ್ವಾರ್ಥ ಅನ್ನಿಸಿಕೊಳ್ಳುತ್ತದೆ. 

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.