ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಯುವ ಪ್ರತಿಭಾವಂತರಿಗೆ ಸಿಗಲಿ ಆದ್ಯತೆ

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡು ಯುವಕರು ಪರಿತಪಿಸುತ್ತಿರುವ ಈ ದುರ್ಭರ ಕಾಲದಲ್ಲಿ ಕೆಲವು ಇಲಾಖೆಗಳಲ್ಲಿ ಅನುಭವದ ನೆಪವೊಡ್ಡಿ ನಿವೃತ್ತ ನೌಕರರನ್ನು, ವಿಶೇಷವಾಗಿ ಅಧಿಕಾರಿಗಳನ್ನು ಅವರ ಅರವತ್ತೈದನೇ ವಯಸ್ಸಿನವರೆಗೆ ತುಸು ಕಡಿಮೆ ಸಂಬಳ ನೀಡಿ ನೇಮಿಸಿಕೊಳ್ಳಲಾಗಿದೆ. ಉದಾಹರಣೆಗೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿವೃತ್ತ ನೌಕರರಿಗೆ ಪಿಂಚಣಿಯ ಜೊತೆ ಇದೊಂದು ವರದಾನವೇ ಆಗಿದೆ. ಅದೇ ಸಂಬಳ ನೀಡಿ ಯುವ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಂಡರೆ ನಿರುದ್ಯೋಗ ಸಮಸ್ಯೆ ಪರಿಹರಿಸಿದಂತಾಗುತ್ತದೆ. ನಮ್ಮ ಜನನಾಯಕರಿಗೆ ಇಂತಹ ಸೂಕ್ಷ್ಮ ವಿಚಾರಗಳತ್ತ ಗಮನಹರಿಯುವುದಿಲ್ಲವೇಕೆ?

ಯುವ ಪ್ರತಿಭಾವಂತರನ್ನು ಅಪಹಾಸ್ಯ ಮಾಡುವಂತೆ ಆಂಧ್ರಪ್ರದೇಶ ಸರ್ಕಾರ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡ ಹೊರಟಿರುವುದು ಸಖೇದಾಶ್ಚರ್ಯ ಉಂಟು ಮಾಡುತ್ತಿದೆ. ಹಾಗೆ ನೋಡಿದರೆ ಜನಪರ ಕಾಳಜಿಯುಳ್ಳ ಸರ್ಕಾರ ನಿವೃತ್ತಿ ವಯಸ್ಸನ್ನು ಕಡಿತಗೊಳಿಸಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಕುರಿತು ನ್ಯಾಯಾಲಯ ಮಧ್ಯ ಪ್ರವೇಶಿಸಿ, ಸರ್ಕಾರ ಮನಸ್ಸಿಗೆ ಬಂದಂತೆ ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿಯ ನಿರ್ಧಾರಗಳಿಗೆ ಕಡಿವಾಣ ಹಾಕಬೇಕು.

- ಪ್ರಕಾಶ್ ಮಲ್ಕಿಒಡೆಯರ್,ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT