ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಸ್ಲಿಮರನ್ನು ಕುರಿತು ನೀಡಿರುವ ಹೇಳಿಕೆ (ಪ್ರ.ವಾ.,ಜೂನ್ 8) ಅನಗತ್ಯ ಮತ್ತು ಅನಪೇಕ್ಷಣೀಯ. ತಮ್ಮ ಹೇಳಿಕೆಗೆ ಸಮರ್ಥನೆ ಎಂಬಂತೆ ಅವರು ಒವೈಸಿ ವಿರುದ್ಧ ಕಿಡಿಕಾರಿದ್ದಾರೆ. ಹಾಗಿದ್ದರೆ ಇವರಿಗೂ ಒವೈಸಿಗೂ ಇರುವ ವ್ಯತ್ಯಾಸವೇನು?

ಒವೈಸಿ ಅವರನ್ನು ವಿರೋಧಿಸುವ ಭರದಲ್ಲಿ ಯತ್ನಾಳರು ಮುಸ್ಲಿಂ ಸಮುದಾಯವನ್ನೇ ಅವಮಾನಿಸುವುದು ಸರಿಯಲ್ಲ. ಬಿಜೆಪಿಯನ್ನು ಬೆಂಬಲಿಸುವ ಮುಸ್ಲಿಮರ ಸಂಖ್ಯೆಯೂ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಮುಂದಿನ ಅವಧಿಗೂ ಮೋದಿಯೇ ಪ್ರಧಾನಿ ಆಗಬೇಕು ಎಂದು ಬಯಸುವ ಮುಸ್ಲಿಮರಿದ್ದಾರೆ. ಯತ್ನಾಳರ ಹೇಳಿಕೆಯಿಂದ ಬಿಜೆಪಿಯಲ್ಲಿರುವ ಮುಸ್ಲಿಮರಿಗೆ ಇರುಸು ಮುರುಸು ಉಂಟಾಗುವುದಿಲ್ಲವೇ? ನಾಯಕನಾದವನು ಯಾವತ್ತೂ ಅಳೆದು ತೂಗಿ ಮಾತನಾಡಬೇಕು. ಇಲ್ಲದಿದ್ದರೆ ಮತದಾರರು ಬುದ್ಧಿ ಕಲಿಸುತ್ತಾರೆ.

– ಮಂಜುನಾಥ ಸು. ಮ., ಚಿಂತಾಮಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.