ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನವೀಯ `ಗಾವು'

Last Updated 31 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಜಾತ್ರೆಗಳ ಭರಾಟೆ. ಈ  ದೇವತೆಗಳಿಗೆ ಅದ್ದೂರಿ ಪೂಜೆ ಪುನಸ್ಕಾರದೊಂದಿಗೆ “ಗಾವು” ಎಂಬ ಅನಿಷ್ಟ ಪದ್ಧತಿ ನಡೆಯುತ್ತಿದೆ. “ಕುರಿ ಅಥವಾ ಮೇಕೆಯನ್ನು ಜೀವಂತ ತಂದು ದೇವಸ್ಥಾನದ ಅಂಗಳದಲ್ಲಿ ನಿಲ್ಲಿಸುತ್ತಾರೆ. ಈ ಆಚರಣೆಗಾಗಿ ನೇಮಿಸಲಾದ ವ್ಯಕ್ತಿ ಇರುತ್ತಾನೆ. ಅವನೇ “ಪೋತರಾಜ”. ಅವನನ್ನು ನೋಡಿದರೇ ಭಯವಾಗುತ್ತದೆ.

ಕೈಯಲ್ಲೊಂದು ಕತ್ತಾಳೆನಾರಿನ ದಪ್ಪ “ಚಾಟಿ”. ಅವನ ಆವೇಶ ಹೆಚ್ಚಿಸಲು ತಮಟೆಯವರ ಭರಾಟೆ ಬಡಿತ.  ಲಯಬದ್ಧವಾಗಿ ಕುಣಿಯುತ್ತಾ “ಪೋತ ರಾಜ” ಚಾಟಿಯಿಂದ ಮೊದಲು ತನ್ನ ದೇಹವನ್ನು ದಂಡಿಸುತ್ತಾನೆ. ತದನಂತರ ಆ ಬಲಿಪ್ರಾಣಿಯನ್ನು ಅವನಿಗೊಪ್ಪಿಸುತ್ತಾರೆ. ಆಗ ಅವನ ಆವೇಶ ಇಮ್ಮಡಿಯಾಗುತ್ತದೆ.

ಪ್ರಾಣಿಯ ಮುಂಗಾಲುಗಳನ್ನು ಹಿಡಿದು, ಚಾಟಿ ಏಟು ಬಾರಿಸುತ್ತಾನೆ. ಆ ಪ್ರಾಣಿಯ “ಆರ್ತನಾದ” ಕ್ರಮೇಣ ನಿಲ್ಲುತ್ತದೆ, ಅಟ್ಟಹಾಸದಿಂದ ದೇವತೆಗೆ ನಮಿಸಿ ಪ್ರಾಣಿಯ ಕುತ್ತಿಗೆ ಕಚ್ಚಿ ಕಚ್ಚಿ ರಕ್ತಹೀರಿ ಸಾಯಿಸುತ್ತಾನೆ. ಇದು ನಿಜಕ್ಕೂ ದೇವತೆಗೆ ಇಷ್ಟಾನಾ? ಈ ಪ್ರಕ್ರಿಯೆ ನಮ್ಮ ನಗರ ದೇವತೆಗಳ ಹೆಸರಿನಲ್ಲಿ ನಡೆಯುತ್ತದೆ. ಮೂಕಪ್ರಾಣಿ ಬಲಿ ತಪ್ಪಿಸುವವರು ಯಾರೂ ಇಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT