ಸಮೀಕ್ಷೆಯೊಂದರಿಂದ ಚಕಿತಗೊಳಿಸುವ ಸಂಗತಿ ಹೊರಬಿದ್ದಿದೆ. ಆಮ್ ಆದ್ಮಿ ಪಕ್ಷದ ವತಿಯಿಂದ ಗೆದ್ದವರಲ್ಲಿ ಶೇ 11 ರಷ್ಟು ಉತ್ಸಾಹಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎನ್ನುವುದೇ ಈ ಸಂಗತಿ!

(ಪ್ರ.ವಾ. ಡಿ. 14) ತಾನು ಅಪ್ಪಟ ಪ್ರಾಮಾಣಿಕತೆಗೆ ಮಾದರಿಯಾಗುತ್ತೇನೆಂದು ದೆಹಲಿಯ, ದೇಶದ ಜನತೆಯ ಮುಂದೆ ಎದೆಯೊಡ್ಡಿ ಮಾತನಾಡುತ್ತಿದ್ದ ಅರವಿಂದ ಕೇಜ್ರಿವಾಲ್ ಇದಕ್ಕೆ ಏನು ಹೇಳುತ್ತಾರೊ! ಈ ಕಳಂಕವನ್ನು ತೊಡೆದುಹಾಕಲು ಈ ಚುನಾಯಿತ ಶಾಸಕರಿಗೆ ರಾಜೀನಾಮೆ ನೀಡುವಂತೆ ತಾಕೀತು ಮಾಡುವ ನಾಯಕ–ದಾರ್ಷ್ಟ್ಯತನ ಕೇಜ್ರಿವಾಲರಿಗೆ ಇರುವುದಾದರೆ ಮತ್ತು ಅವರು ಹಾಗೆ ತಾಕೀತು ಮಾಡಿದರೆ, ಅವರನ್ನು ಮೆಚ್ಚೋಣ.

ಇಲ್ಲದಿದ್ದಲ್ಲಿ, ಇದು ಕೂಡ ಇತರರ ಹಾದಿಯಲ್ಲೇ ಸಾಗುವ ಪಕ್ಷ ಎಂದುಕೊಂಡು ಜನತೆ ಸುಮ್ಮನಾಗಬೇಕಾಗುತ್ತದೆ. ಹೀಗೆ ‘ಸುಮ್ಮ’ನಾಗುವುದೂ ಆಮ್ ಆದ್ಮಿಗೆ ಮುಂದಕ್ಕೆ ಕ್ಷೇಮ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.