ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದ ಆಟೋಪಕರಣಗಳ ಅವ್ಯವಸ್ಥೆ

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ನರಸಿಂಹರಾಜ ಕಾಲೊನಿಯಲ್ಲಿರುವ ಶ್ಯಾಮಣ್ಣ ಪಾರ್ಕ್‌ನಲ್ಲಿ ಆಟೋಪಕರಣಗಳು ಯಥೇಚ್ಛವಾಗಿದ್ದು ಮಕ್ಕಳಿಗೆ ಉತ್ತಮ ಮನರಂಜನಾ ಕೇಂದ್ರವಾಗಿತ್ತು. ಆದರೆ ಈಗ ಅದು ಬಹುತೇಕ ನಿಷ್ಪ್ರಯೋಜಕವಾಗಿದೆ.

ಮೊದಲನೆಯದಾಗಿ ಗೋಳಾಕಾರದ ತಿರುಗುಬಂಡಿ ಮೂಲೆ ಸೇರಿದೆ. ಉಯ್ಯಾಲೆಗಳ ಪೈಕಿ ಒಂದರ ಸರಪಳಿ ಕಿತ್ತು ಹೋಗಿದ್ದರೆ ಮತ್ತೊಂದರ ಸರಪಳಿ ಸಹಿತ ಮೇಲಕ್ಕೆ ಇಟ್ಟಿದ್ದಾರೆ. ಮತ್ತೊಂದು ದೊಡ್ಡದಾದ ಗೋಳಾಕಾರದ ತಿರುಗುಬಂಡಿಯ ಜಂತಿ ತುಕ್ಕುಹಿಡಿದಿದೆ. ಜಾರುಬಂಡೆಯ ಮೆಟ್ಟಿಲು ಏರಲು ಮಕ್ಕಳು ಬಹಳ ಸಾಹಸಪಡಬೇಕಾಗಿದೆ. ಜನರಿಗೆ ಕುಳಿತುಕೊಳ್ಳಲು ಹಾಕಿದ್ದ ಆಸನಗಳು ಮುರಿದುಬಿದ್ದಿವೆ. ಫೈಬರ್ ಜಾರುಬಂಡೆಯ ಮೇಲ್ಭಾಗದಲ್ಲಿ ರಂಧ್ರವಾಗಿದ್ದು ಬಳಸಲು ಸಮರ್ಪಕವಾಗಿಲ್ಲ.
ಇವೆಲ್ಲವುಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT