ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತು ಸಿಗಲಿ

Last Updated 19 ಜುಲೈ 2015, 19:35 IST
ಅಕ್ಷರ ಗಾತ್ರ

ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತು ನೀಡು ವುದಾಗಿ ಹಲವಾರು ವರ್ಷಗಳಿಂದ ಹೇಳುತ್ತಿದೆ. ಆದರೆ ಮಾಡಿದ ಕೆಲಸ ಮಾತ್ರ ಬಹಳ ಕಡಿಮೆ. ನೆರೆಯ ರಾಜ್ಯಗಳು ಹಾಗೂ ನಮ್ಮ ರಾಜ್ಯಕ್ಕಿ೦ತ ಚಿಕ್ಕದಾಗಿರುವ ದೇಶಗಳು ಪ್ರವಾಸೋದ್ಯಮದಿ೦ದ ಸಾಕಷ್ಟು ಆದಾಯ ಗಳಿಸುತ್ತಿವೆ. ನಮ್ಮ ರಾಜ್ಯದಲ್ಲಿ ಪ್ರಸಿದ್ಧ ಹಾಗೂ ಆಕರ್ಷಕ ಪ್ರವಾಸಿ ತಾಣಗಳಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ನಿರೀಕ್ಷಿತ ಸಾಧನೆ ಆಗಿಲ್ಲ.

ನಮ್ಮ ಪ್ರವಾಸಿ ತಾಣಗಳಲ್ಲಿ ಕಾಣಸಿಗುವುದು ಕೆಟ್ಟ ರಸ್ತೆಗಳು, ಅಸಮರ್ಪಕ ದಾರಿ ದೀಪ  ಹಾಗೂ ಪ್ರವಾಸಿಗಳಿಗೆ ಬೇಕಾದ ಭದ್ರತಾ ವ್ಯವಸ್ಥೆಯ ಕೊರತೆ. ಸರ್ಕಾರ ಹೋಟೆಲ್‌ಗಳನ್ನು ನಡೆಸಬೇಕಾಗಿಲ್ಲ, ಆದರೆ ಅದು ತನ್ನ ಜವಾಬ್ದಾರಿಯಾದ ರಸ್ತೆ-ವಿದ್ಯುತ್-ನೀರು-ನೈರ್ಮಲ್ಯ-ಭದ್ರತೆ ಒದಗಿಸಿದರೆ ಪ್ರವಾಸೋದ್ಯಮದಲ್ಲಿ ಹಣ ಹೂಡಲು ಹೂಡಿಕೆದಾರರೂ, ಇವುಗಳ ಅ೦ದ ಸವಿಯಲು ಪ್ರವಾಸಿಗರೂ ಬರುತ್ತಾರೆ. ಸರ್ಕಾರದ  ಆದಾಯ ಹೆಚ್ಚಳಕ್ಕೂ ಅವಕಾಶ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT