ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿವಾಣವಿರಲಿ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಾಯಿ ಸಾಕಲು ಬಿ.ಬಿ.ಎಂ.ಪಿ.ಯಿಂದ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 4). ಇದು ಸ್ವಾಗತಾರ್ಹ. ಇನ್ನು ಮುಂದೆ ಸಾಕುನಾಯಿಗಳ ಕೊರಳಪಟ್ಟಿಯಲ್ಲಿ ಪರವಾನಗಿ ಪತ್ರವೂ ನೇತಾಡಬಹುದು.

ಪರವಾನಗಿ ನೀಡುವುದರ ಜೊತೆಗೆ, ಮುಂಜಾನೆ ಸಾಕುನಾಯಿಗಳನ್ನು ಹೊರಗೆ ಅಡ್ಡಾಡಿಸುವ ನೆಪದಲ್ಲಿ ಬೀದಿಯ ಮೇಲೆ ಸಿಕ್ಕಸಿಕ್ಕಲ್ಲಿ ಶೌಚ ಮಾಡಿಸುವ ಕ್ರಮಕ್ಕೆ ಕಡಿವಾಣ ಹಾಕಬೇಕು. ಇಷ್ಟಪಟ್ಟು ಸಾಕಿ, ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಗೆ ಪಾತ್ರವಾದ ನಾಯಿಗಳ ಈ ನಡೆ, ಸಾಕುವವರಿಗೆ ಯಾವ ಘನತೆಯನ್ನು ತಂದುಕೊಡುತ್ತದೆ? ಮೊದಲೇ ಬೀದಿಯುದ್ದಕ್ಕೂ ಇರುವ ಕಸ, ಉಗುಳಿನಿಂದ ತಪ್ಪಿಸಿಕೊಳ್ಳಲು ಸರ್ಕಸ್ ಮಾಡಿಕೊಂಡು ನಡೆಯಬೇಕಾದ ದಾರಿಹೋಕನ ಸಂಕಷ್ಟಕ್ಕೆ ನಾಯಿಯ ಶೌಚವೂ ಸೇರ್ಪಡೆಯಾಗಿದೆ. ಪರವಾನಗಿ ಶುಲ್ಕ ವಿಧಿಸುವುದರ ಜೊತೆಗೆ ಇಂಥ ಕೃತ್ಯ ನಡೆಸಿದವರಿಗೆ ದಂಡ ವಿಧಿಸಲೂ ಕ್ರಮ ಕೈಗೊಳ್ಳುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT