ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತೆ, ಒಂಟೆ ಹಾಲಿಗೂ ಬಂತು ಬೆಲೆ!

Last Updated 10 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹಾಲೆಂದರೆ ನಂದಿನಿ ಹಾಲು, ಪೌಡರ್ ಹಾಲು ಎನ್ನುವ ಈ ದಿನಗಳಲ್ಲಿ  ವಿಧಾನ ಪರಿಷತ್ ಸದಸ್ಯ ಉಗ್ರಪ್ಪನವರು ಕತ್ತೆ ಹಾಲಿನ ಬಗ್ಗೆ, ದಿಲ್ಲಿಯಲ್ಲಿ ಕೃಷಿ ಮಂತ್ರಿ ಅವರು ಒಂಟೆ ಹಾಲಿನ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನು ಗಮನಿಸಿದರೆ ನಮ್ಮ ಜನರು ಇನ್ನು ಮುಂದೆ ಕತ್ತೆ ಮತ್ತು ಒಂಟೆಯನ್ನು ಹೆಚ್ಚು ಸಾಕ­ಬಹುದೇನೋ? 

ಬಹಳ ಹಿಂದೆ ಈಜಿಪ್ಟಿನ ರಾಣಿ ಕ್ಲಿಯೋಪಾತ್ರ  ಕತ್ತೆಯ ಹಾಲಿನಿಂದ ಸ್ನಾನ ಮಾಡು­ತ್ತಿದ್ದಳಂತೆ. ಸೌಂದರ್ಯ ವರ್ಧನೆಗಾಗಿ ಆ ರಾಣಿಗೆ ಪ್ರತಿದಿನ ಸ್ನಾನ ಮಾಡಲು 700 ಕತ್ತೆಗಳ ಹಾಲು ಬೇಕಿತ್ತಂತೆ. ಈಗ ಕತ್ತೆ ಹಾಲಿಗೆ ಅಪಾರ ಬೇಡಿಕೆ ಬಂದಿದ್ದು, ಒಂದು ಲೀಟರ್‌ ಹಾಲಿನ ದರ ₨ 2000­ದವರೆಗೆ ಇದೆ.

ಒಂಟೆ ಹಾಲು, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ರೋಗಗಳಿಗೆ ಮದ್ದು ಎಂಬ ನಂಬಿಕೆ ಇದೆ. ರಾಜಸ್ತಾನದಲ್ಲಿ ಒಂಟೆ ಹಾಲಿನ ಉತ್ಪಾದನೆ­ಯನ್ನು ಹೆಚ್ಚಿಸಲು ಭಾರತೀಯ ಕೃಷಿ ಸಂಶೋ­ಧನಾ ಸಂಸ್ಥೆ ಒಂಟೆ ಪಾಲಕರಿಗೆ ತರಬೇತಿ ನೀಡು­ತ್ತಿದೆ. ಒಂಟೆ ಸಂರಕ್ಷಣೆಗೆ  ಕೇಂದ್ರ ಸರ್ಕಾರ ಮುಂದಾಗಿದೆ.

ಆಯುರ್ವೇದದ  ಪ್ರಕಾರ 8 ವಿಧದ ಹಾಲು­ಗಳಿಗೆ ಔಷಧೀಯ ಗುಣಗಳಿವೆ. ಅಷ್ಟಕ್ಷೀರ ಎಂಬ ಈ ಪರಿಕಲ್ಪನೆಯಲ್ಲಿ ಹಸು, ಎಮ್ಮೆ, ಮೇಕೆ, ಕುರಿ, ಒಂಟೆ, ಕತ್ತೆ, ಆನೆ ಮತ್ತು ತಾಯಿಯ ಹಾಲು  ಸೇರುತ್ತವೆ. ಮುಂದಿನ ದಿನಗಳಲ್ಲಿ ಎಲ್ಲಾ ಬಗೆಯ ಹಾಲಿಗೂ ಬೇಡಿಕೆ ಬರಬಹುದು.  ಆಗ ರೈತರು ಹಸು, ಎಮ್ಮೆ, ಕುರಿ, ಮೇಕೆಗಳನ್ನು ಹೆಚ್ಚು ಹೆಚ್ಚು ಸಾಕಲು ಮುಂದಾಗುವರು. ಇದರಿಂದ ರೈತರ ಆರ್ಥಿಕ ಸ್ಥಿತಿಯೂ ಸುಧಾರಿಸಬ­ಹುದೆನಿ­ಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT