ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಿನಿಮಾ ತೋರಿಸಿ

Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಹವಾ ನಿಯಂತ್ರಿತ ಐರಾವತ ಬಸ್ಸುಗಳು ಮುಖ್ಯ ನಗರಗಳಿಗೆ ಉತ್ತಮವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿವೆ. ಪ್ರಯಾಣಿಕರ ಮನರಂಜನೆಗಾಗಿ ಬಸ್ಸುಗಳಲ್ಲಿ ಇರುವ ಟಿ.ವಿ.ಗಳಲ್ಲಿ ಚಾಲಕ ಅಥವಾ ನಿರ್ವಾಹಕರು ಹಿಂದಿ ಚಲನಚಿತ್ರಗಳನ್ನು ಪ್ರದರ್ಶಿಸುವುದೇ ಹೆಚ್ಚು.

ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಿ ಎಂದು ಒತ್ತಾಯಿಸಿದರೆ, ‘ಪ್ರಯಾಣಿಕರಲ್ಲಿ ಕನ್ನಡ ತಿಳಿಯದ ವರಿರುತ್ತಾರೆ, ಅದಕ್ಕಾಗಿ ರಾಷ್ಟ್ರ ಭಾಷೆಯಾದ ಹಿಂದಿ ಚಿತ್ರಗಳನ್ನು ಪ್ರದರ್ಶಿಸುತ್ತೇವೆ’ ಎಂದು ಉತ್ತರಿಸು ತ್ತಾರೆ. ರಾಜ್ಯ ಸಾರಿಗೆ ನಿಗಮಗಳು ಕರ್ನಾಟಕ ಸರ್ಕಾ ರದ ಅಧೀನದಲ್ಲಿವೆ. ಇಲ್ಲಿ ಕನ್ನಡ ಆಡಳಿತ ಭಾಷೆ. ಆದಕಾರಣ ಕನ್ನಡಕ್ಕೆ ಮನ್ನಣೆ ಸಿಗಬೇಕು. ಅಲ್ಲದೆ ಶೇ 10ರಷ್ಟು ಕನ್ನಡೇತರರು ಪ್ರಯಾಣಿಸುತ್ತಾರೆ ಎಂಬ ಕಾರಣಕ್ಕೆ ಕನ್ನಡವನ್ನು ಮೂಲೆಗುಂಪು ಮಾಡು ವುದು ಯಾವ ನ್ಯಾಯ?

ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಚಲನಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ಚಿಂತಿಸಬೇಕು. ಇಂತಹ ಕ್ರಮದಿಂದ ಅನ್ಯರೂ ನಮ್ಮ ಭಾಷೆ ಕಲಿಯಲು ಅನುವು ಮಾಡಿ ದಂತಾಗುತ್ತದೆ, ಕನ್ನಡ ಭಾಷೆ ಮತ್ತು ಚಲನಚಿತ್ರ ಗಳನ್ನು ಉಳಿಸಿ  ಬೆಳೆಸುವ ಕೆಲಸಕ್ಕೂ ಪ್ರೇರಣೆ ಸಿಕ್ಕಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT