ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲೇ ಸಿಗಲಿ

Last Updated 24 ಜುಲೈ 2015, 19:53 IST
ಅಕ್ಷರ ಗಾತ್ರ

ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅನುವು ಮಾಡಿಕೊಡಲು ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಹೊಸ ಸಂಸ್ಥೆ ಹುಟ್ಟಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ಒಂದು ಚಲನಚಿತ್ರವನ್ನು ಯಾವ ಭಾಷೆಯಲ್ಲಿ ನೋಡಬೇಕು ಎಂಬುದು ನೋಡುಗನ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಕರ್ನಾಟಕದಲ್ಲಿ ಜಾರಿಯಲ್ಲಿರುವ ಅಘೋಷಿತ ಡಬ್ಬಿಂಗ್ ನಿಷೇಧ, ಕೋಟ್ಯಂತರ ಕನ್ನಡಿಗರಿಗೆ ದೊರೆಯಬೇಕಾಗಿದ್ದ ಈ ಸಹಜ ಹಕ್ಕನ್ನು ಕಸಿದುಕೊಂಡಿದೆ. ಕನ್ನಡ ಪರ ಎಂದು ಹೇಳಿಕೊಳ್ಳುವ ಕೆಲವರ ಸ್ವಹಿತಾಸಕ್ತಿ ಇದಕ್ಕೆ ಕಾರಣವಾಗಿದ್ದು ಕನ್ನಡಿಗರ ದೌರ್ಭಾಗ್ಯವೇ ಸರಿ.

ತೆಲುಗು ಚಿತ್ರವನ್ನು ತೆಲುಗಿನಲ್ಲಿ ನೋಡುವುದು ಕನ್ನಡಪರವೋ ಅಥವಾ ಅದನ್ನೇ ಕನ್ನಡಕ್ಕೆ ಡಬ್ ಮಾಡಿ ಕನ್ನಡದಲ್ಲಿ ನೋಡುವುದು ಕನ್ನಡಪರವೋ ಎಂಬ ಪ್ರಶ್ನೆಯನ್ನು ಡಬ್ಬಿಂಗ್ ನಿಷೇಧದ ಪರ ವಾದ ಮಾಡುವ ಕೆಲವು ಕನ್ನಡ ಪರ ಸಂಘಟನೆಗಳ ಮುಖಂಡರು ಕೇಳಿಕೊಳ್ಳಬೇಕು. ಡಬ್ಬಿಂಗ್ ನಿಷೇಧ, ಕನ್ನಡಿಗರನ್ನು ಕನ್ನಡದಲ್ಲಿ ಮನರಂಜನೆ ಪಡೆಯುವ ಸವಲತ್ತಿನಿಂದ ದೂರ ಸರಿಸಿ ಕನ್ನಡ ಚಿತ್ರರಂಗವನ್ನೂ ದುಃಸ್ಥಿತಿಗೆ ಒಯ್ಯಲಿದೆ. ಡಬ್ ಆದ ಚಿತ್ರಗಳಲ್ಲೂ ಒಳ್ಳೆಯದನ್ನು ಸ್ವೀಕರಿಸಿ ಜೊಳ್ಳನ್ನು ಸೋಲಿಸುವ ಅವಕಾಶ ನೋಡುಗರಿಗೆ ಇದ್ದೇ ಇರುತ್ತದೆ.

ಡಬ್ಬಿಂಗ್ ಇದ್ದರೂ ಇಲ್ಲದಿದ್ದರೂ ಕನ್ನಡದಲ್ಲಿ ತಯಾರಾಗುವ ಒಳ್ಳೆಯ ಚಿತ್ರಗಳೇ ಕನ್ನಡ ಚಿತ್ರರಂಗವನ್ನು ಬೆಳೆಸಲು ಸಾಧ್ಯ. ಇನ್ನು ಮುಂದೆಯಾದರೂ ಡಬ್ಬಿಂಗ್‌ಗೆ ಅವಕಾಶ ದೊರೆತು ಜಗತ್ತಿನ ಎಲ್ಲ ಮನರಂಜನೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT