ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ನೇಮಕ ಎಂದು?

Last Updated 9 ಜನವರಿ 2013, 19:59 IST
ಅಕ್ಷರ ಗಾತ್ರ

2009ರಲ್ಲಿ ಸ್ಥಾಪನೆಗೊಂಡು, ದೇಶದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು 92 ಕಾನೂನು ಶಿಕ್ಷಣ ಸಂಸ್ಥೆಗಳಿಗೆ ನಿಯಂತ್ರಕ ಸಂಸ್ಥೆಯಾಗಿದೆ. ಬೆಳೆಯುತ್ತಿರುವ ಕಾನೂನು ಶಿಕ್ಷಣ ಮತ್ತು ನ್ಯಾಯದಾನ ಸನ್ನಿವೇಶದಲ್ಲಿ ಈ ಸಂಸ್ಥೆಗೆ ವಿಶಿಷ್ಟ ಮಹತ್ವ ಮತ್ತು ಹೊಣೆಗಾರಿಕೆ ಇದೆ. ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಯಾಗಿ ಅದನ್ನು ಸಮರ್ಥವಾಗಿ ಮುನ್ನಡೆಸಿದ ಪ್ರೊ. ಜೆ.ಎಸ್. ಪಾಟೀಲ ಅವರು ಸದ್ಯವೇ ನಿವೃತ್ತಿಯಾಗಲಿದ್ದು ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ನೇಮಕದ ಪ್ರಕ್ರಿಯೆ ಜಾರಿಯಲ್ಲಿರುವುದಾಗಿ ತಿಳಿದುಬಂದಿದೆ.

ಈ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಸಮರ್ಥ ಕನ್ನಡಿಗರೊಬ್ಬರ ನೇಮಕ ಅಗತ್ಯವಾಗಿದೆ. ಕಾನೂನು ವಿಶ್ವ ವಿದ್ಯಾಲಯವು ವಿಶಿಷ್ಟ ಸಾಮಾಜಿಕ ಸ್ಪಂದನದ ನಿರೀಕ್ಷೆಯುಳ್ಳ ಒಂದು ಸಂಸ್ಥೆ. ವಿವಿಯ ವಕೀಲವ್ಯವಹಾರ, ಆಡಳಿತಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವ ಬಂದಿದೆ, ಬರುತ್ತಿದೆ. ಬಹುತೇಕ ಕಾನೂನು ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಅಭ್ಯಸಿಸಿ ಪರೀಕ್ಷೆಯನ್ನು ತೆಗೆದುಕೊಳ್ಳುವುದಲ್ಲದೇ, ಜಿಲ್ಲಾ ನ್ಯಾಯಾಲಯ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ಕನ್ನಡವೇ ವ್ಯಾವಹಾರಿಕ ಭಾಷೆಯಾಗಿರುವುದರಿಂದ ರಾಜ್ಯದ ಕಾನೂನು ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಸಿಗಬೇಕು. ನ್ಯಾಯದಾನದಲ್ಲಿ ಕೋರ್ಟು, ಕಚೇರಿಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯ ಹೆಚ್ಚಿಸುವ ಕಾಲವಿದು.

ಇಂತಹ ಸನ್ನಿವೇಶದಲ್ಲಿ ಕಾನೂನು ವಿವಿಗೆ ಕನ್ನಡನಾಡು, ಭಾಷೆ, ಸಂಸ್ಕೃತಿ, ನ್ಯಾಯ ಶಿಕ್ಷಣ, ನ್ಯಾಯದಾನ ಸಂದರ್ಭಗಳನ್ನು ಬಲ್ಲ ಸಾಮರ್ಥ್ಯ, ಉತ್ಸಾಹ, ಅರ್ಹತೆಯುಳ್ಳ ಓರ್ವ ಕನ್ನಡಿಗರನ್ನು ನೇಮಿಸುವುದು ಅಪೇಕ್ಷಿತ, ಅಂತಹ ಸಮರ್ಥರಿಗೆ ನಮ್ಮ ರಾಜ್ಯದಲ್ಲಿ ಕೊರತೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT