ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅವಲಂಬನೆ ಪ್ರಮಾಣ ಶೇ 49.24

Last Updated 15 ಮಾರ್ಚ್ 2015, 19:27 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿದ ದುಡಿಮೆಗಾರರ ಪ್ರಮಾಣ ಶೇ 60 ಎಂದು ‘ಪ್ರಜಾವಾಣಿ’ ಅಭಿಮತ ಪುಟದಲ್ಲಿ ದಾಖಲಾಗಿದೆ (ಮಾ.14).  ವಾಸ್ತವವಾಗಿ 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿನ ಒಟ್ಟು ದುಡಿಮೆಗಾರರ ಸಂಖ್ಯೆ 278.72 ಲಕ್ಷ. ಅದರಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವವರ ಸಂಖ್ಯೆ 137.25 ಲಕ್ಷ.

ಅಂದರೆ ಕೃಷಿಯ ಅವಲಂಬನೆ ಪ್ರಮಾಣ ಶೇ 49.24ರಷ್ಟಾಗುತ್ತದೆ. ಅದು ಶೇ 60 ಅಲ್ಲ. ಅದರಲ್ಲೂ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ (ದ.ಕ.ಪ್ರ) ಇದು ಕೇವಲ ಶೇ 40.47ರಷ್ಟಿದೆ. ಬೆಳಗಾವಿ ವಿಭಾಗದಲ್ಲಿ ಕೃಷಿ ಅವಲಂಬನೆ ಪ್ರಮಾಣ 2011ರಲ್ಲಿ ಶೇ 60.52ರಷ್ಟಿದೆ. ಹೈದರಾಬಾದ್ ಕರ್ನಾಟಕ ಪ್ರದೇಶವನ್ನು (ಕಲಬುರಗಿ ವಿಭಾಗ) ಪ್ರತೇಕವಾಗಿ ತೆಗೆದುಕೊಂಡರೆ ಅಲ್ಲಿ ಕೃಷಿ ಅವಲಂಬನೆ ಪ್ರಮಾಣ ಶೇ 68.52ರಷ್ಟಿದೆ.

ಈ ಅಂಕಿಅಂಶಗಳು ಕೃಷಿ ಅವಲಂಬನೆಯ ಬಗ್ಗೆ ಮಾತ್ರ ಬೆಳಕು ಚೆಲ್ಲುತ್ತಿಲ್ಲ. ಅವು ರಾಜ್ಯದಲ್ಲಿನ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಬಗ್ಗೆಯೂ ನಮಗೆ ಸೂಚನೆ ನೀಡುತ್ತಿವೆ. ಅಭಿವೃದ್ಧಿಯು ದ.ಕ.ಪ್ರ.ದಲ್ಲಿ ಉನ್ನತ ಮಟ್ಟದಲ್ಲಿದ್ದರೆ, ಬೆಳಗಾವಿ ವಿಭಾಗದಲ್ಲಿ ಸಾಧಾರಣ ಮಟ್ಟದಲ್ಲಿದೆ ಮತ್ತು ಅದು ಕಲಬುರಗಿ ವಿಭಾಗದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT