ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲರ ಸಂಘರ್ಷ: ಕಾದು ನೋಡೋಣ

Last Updated 26 ಜನವರಿ 2014, 19:30 IST
ಅಕ್ಷರ ಗಾತ್ರ

ಅರಾಜಕತೆ ವಿಷಯಕ್ಕೆ ಬಂದರೆ, ಗಾಂಧೀಜಿಯವರ ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹಗಳಂತಹವು ಸ್ವಲ್ಪ ಅರಾಜಕತೆಯನ್ನೇ ಉಂಟುಮಾಡಿದ್ದವು. ಸತ್ಯಾಗ್ರಹಗಳು ಸ್ವಲ್ಪ ಹಾಗೇ. ಅಲ್ಲದೆ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ ಮಾಡಬೇಕಾದ ರಾಜನೀತಿಯೇ ಇಲ್ಲದಾಗ ಅಥವಾ ಉಲ್ಟಾ ಹೊಡೆದಾಗ, ‘ಮೃಚ್ಛಕಟಿಕ’ದ ಕಾಲದಿಂದಲೂ ಜನಸಾಮಾನ್ಯರು ಸ್ವಲ್ಪ ವ್ಯಗ್ರರಾಗಿದ್ದಾರೆ. ಅದರಲ್ಲಿ ಅಚ್ಚರಿ ಇಲ್ಲ. ಏನೇ ಇರಲಿ ಹರಿಯದ, ಮುರಿಯದ ‘ಚೂಯಿಂಗ್‌ ಗಮ್‌’ ರಾಜಕಾರಣದ ಹೊಂದಾಣಿಕೆಯ ವಿಳಂಬ ನೀತಿಯನ್ನು ಸ್ವಾತಂತ್ರ್ಯ ಬಂದಾಗಿನಿಂದ ಅನುಭವಿಸಿ ಪರಿಣಾಮ ನೋಡಿಯಾಗಿದೆ. ಈಗ ಎ.ಎ.ಪಿ.ಯದು ಒಂದು ನೇರ ಸಂಘರ್ಷದ, ಅಹಿಂಸಾತ್ಮಕವಾದ ಹೊಸಬಗೆ. ಕಾದು ನೋಡೋಣ. ಈಗಲೇ ಕಾಲೆಳೆದು ಹತ್ತರ ಜೊತೆಗೆ ಸೇರಿಸುವುದು ಅದರಲ್ಲೂ ದೆಹಲಿಯ ತರಹದ ಪ್ರದೇಶದಲ್ಲಿ ಬೇಡ ಅನ್ನಿಸುತ್ತದೆ. ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT