ವರ್ಷಕ್ಕೆ 365 ದಿನಗಳಂತೆ 5 ವರ್ಷಕ್ಕೆ 1825 ದಿನಗಳಾಗುತ್ತವೆ. ಅಂದರೆ ಸಚಿವರು ದಿನವೊಂದಕ್ಕೆ ಗಳಿಸಿದ್ದು ಸುಮಾರು ₹ 32 ಲಕ್ಷ. ಪ್ರತಿ ಗಂಟೆಗೆ ಒಂದು ಲಕ್ಷ ರೂಪಾಯಿಗೂ ಹೆಚ್ಚು! ಇಂಧನ ಸಚಿವರಿಗೆ ಇಷ್ಟೊಂದು ‘ಎನರ್ಜಿ’ ದೊರೆತದ್ದು ಎಲ್ಲಿಂದ? ಈ ಪ್ರಮಾಣದ ಗಳಿಕೆಯ ಗುಟ್ಟೇನು? ನಮಗೂ ಸ್ವಲ್ಪ ಹೇಳಿದರೆ ಕರ್ನಾಟಕ ರಾಜ್ಯದ ಪ್ರಜೆಗಳಾದ ನಾವೂ ಅವರಂತೆ ಗಳಿಸಿ ಕರ್ನಾಟಕವನ್ನು ಸಿರಿವಂತಗೊಳಿಸುತ್ತೇವೆ.
ಸುಭಾಸ ಯಾದವಾಡ, ವಿಜಯಪುರ