ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯದ ನಿಯಮ

Last Updated 1 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಸಂಚರಿಸುವ ರೈಲುಗಳಲ್ಲಿನ ಟಿಕೆಟ್‌ಗಳನ್ನು ಕನ್ನಡದಲ್ಲೂ ಮುದ್ರಿಸಿ ಎಂದು ಶಾಸಕ ಸಿ.ಟಿ.ರವಿ ಅವರು ಟ್ವಿಟರ್‌ನಲ್ಲಿ ರೈಲ್ವೆ ಸಚಿವರಿಗೆ ಮಾಡಿದ ಮನವಿಗೆ ಇಲಾಖೆಯಿಂದ ಬಂದ ಉತ್ತರ ನಿರಾಶಾದಾಯಕವಾಗಿದೆ. ಇಲಾಖೆಯ ನಿಯಮದ ಪ್ರಕಾರ ಕೆಳಹಂತದ ರೈಲುಗಳಲ್ಲಿನ ಟಿಕೆಟುಗಳನ್ನು ಮಾತ್ರ ಪ್ರಾದೇಶಿಕ ಭಾಷೆಯಲ್ಲಿ ಮುದ್ರಿಸಲಾಗುತ್ತದೆ, ಉಳಿದವುಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತದೆ ಎಂದು ಅವರು ಉತ್ತರಿಸಿದ್ದಾರೆ.

ಭಾರತದ ವೈವಿಧ್ಯ, ಸಮಾನತೆಯ ಹಿತದೃಷ್ಟಿಯಿಂದ ಇಂಥ ನೀತಿ ಆತಂಕಕಾರಿ. ಇದರ ಪ್ರಕಾರ, ಕೆಳಹಂತದ ಸೇವೆ ಬಳಸುವವರು ಮಾತ್ರ ಕನ್ನಡಿಗರು ಅಥವಾ ಭಾರತದಲ್ಲಿ ಹಿಂದಿ, ಇಂಗ್ಲಿಷ್‌ ಬಿಟ್ಟು ಉಳಿದ ಭಾಷೆಗಳು ಎರಡನೇ ದರ್ಜೆಯವು ಎಂಬಂತಾಗುತ್ತದೆ. ಕರ್ನಾಟಕದೊಳಗೆ ರೈಲಿನಲ್ಲಿ ಓಡಾಡಲೂ ಹಿಂದಿ ತಿಳಿದಿರಬೇಕು ಎಂಬ ತಾರತಮ್ಯದ ನಿಯಮ ಎಷ್ಟು ಸರಿ?

ಭಾರತೀಯರೆಲ್ಲರೂ ಸಮಾನರು ಎಂದಾದರೆ ಭಾರತೀಯರ ಭಾಷೆಗಳೇಕೆ ಸಮಾನ ಅಲ್ಲ? ಸ್ವಾತಂತ್ರ್ಯಾ ನಂತರದ 69 ವರ್ಷಗಳಲ್ಲಿ ರಾಜ್ಯದಲ್ಲಿ ಆದ ರೈಲ್ವೆ ಪ್ರಗತಿ ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡಿಗಿಂತಲೂ ತೀರಾ ಶೋಚನೀಯವಾಗಿದೆ.  ರಾಜಕೀಯ ಬಲದ ಆಧಾರದ ಮೇಲೆ ಯೋಜನೆಗಳಿಗೆ ಹಣ ನೀಡುವ ಮತ್ತು ಕರ್ನಾಟಕದ ಊರುಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸದ ರೈಲ್ವೆ ಇಲಾಖೆ ಇದ್ದೂ ಇಲ್ಲದಂತಾಗಿದೆ. ಭಾರತೀಯ ರೈಲ್ವೆಯನ್ನು ವಿಕೇಂದ್ರೀಕರಿಸಿ ರಾಜ್ಯಗಳಿಗೆ ವಹಿಸಿದರೆ, ನಮ್ಮ ಒಳಸಾರಿಗೆ ಹೆಚ್ಚು ಪ್ರಗತಿ ಹೊಂದುತ್ತದೆ. ಜೊತೆಗೆ ನಮಗೆ ಸಿಗುವ ಸೇವೆ, ಮಾಹಿತಿ ಕೂಡ ನಮ್ಮ ನುಡಿಯಲ್ಲಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT