ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಬವಣೆ ತಪ್ಪಲಿ

Last Updated 15 ಜನವರಿ 2015, 19:30 IST
ಅಕ್ಷರ ಗಾತ್ರ

ಹೊಸಪೇಟೆ ಬಳಿಯ ಬಸವನದುರ್ಗ ಎಂಬ ಹಳ್ಳಿಯ ದಲಿತಕೇರಿಯಲ್ಲಿ ೩೦೦ ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವುದು ಮತ್ತು ಅನೇಕರು ಡೆಂಗೆಯಿಂದ ಬಳಲಿರುವುದು ಕಂಡು ಬರುತ್ತಿದೆ. ಆರೋಗ್ಯ ಇಲಾಖೆ ಅತ್ತ ಗಮನವನ್ನೇ ಕೊಟ್ಟಿರಲಿಲ್ಲ. ಸ್ಥಳೀಯ ಹೋರಾಟಗಾರರ ಮತ್ತು ಕೆಲ ಮಾಧ್ಯಮಗಳ ಒತ್ತಾಸೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ಕೊಪ್ಪಳದ ಸಮೀಪದಲ್ಲಿ­ರುವ ಹಿಟ್ನಾಳ ಗ್ರಾಮದ ದಲಿತಕೇರಿ­ಯಲ್ಲಿ ಸುಮಾರು ೨೦೦ ಜನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿ­ರುವುದು ವರದಿ­ಯಾಗಿದೆ. 

ಹಾಗೆ ನೋಡಿದರೆ ಹೈದರಾಬಾದ್‌ ಕರ್ನಾಟಕದ ಬಹುತೇಕ ಹಳ್ಳಿಗಳ ದಲಿತರ ಕೇರಿಗಳಲ್ಲಿ ವಾಸಿಸುತ್ತಿರುವವರು ಅನಾರೋಗ್ಯ ದಿಂದ ಬಳಲುತ್ತಿದ್ದಾರೆ.  ಇದಕ್ಕೆ ಕಾರಣ­ವೆಂದರೆ, ಮಾಲಿನ್ಯ ಮತ್ತು ಅಶುದ್ಧ ಕುಡಿ­ಯುವ ನೀರಿನ ಸರಬರಾಜು. ಇದಲ್ಲದೆ ಸಂಬಂಧಿಸಿದವರು ಅಲ್ಲಿನ ಚರಂಡಿಗಳನ್ನು  ಸ್ವಚ್ಛ ಮಾಡುತ್ತಿಲ್ಲ. ಸೊಳ್ಳೆ, ನೊಣಗಳ ಕಾಟವು ವಿಪರೀತವಾಗಿವೆ.  ಹೀಗಾಗಿ ಇಲ್ಲಿಯ ಜನ ಸದಾ ಒಂದಲ್ಲಾ ಒಂದು ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆ ಇತ್ತ ಗಮನಹರಿಸ­ಬೇಕಿದೆ.

ದಲಿತಕೇರಿಗಳಿಗೆ ಪ್ರತ್ಯೇಕವಾದ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು. ಚರಂಡಿ ಮತ್ತು ನೀರುಗುಂಡಿಗಳನ್ನು ಸ್ವಚ್ಛವಾಗಿಡ­ಬೇಕು. ಕುಡಿ­ಯಲು ಶುದ್ಧವಾದ ನೀರಿನ ಪೂರೈಕೆ­ಯಾಗಬೇಕು. ಆರೋಗ್ಯಕರ ಮೂಲ ಸೌಕರ್ಯಗಳು ದಲಿತಕೇರಿಗಳಿಗೆ ಸಿಗು­ವಂತಾ­ದರೆ ಮಾತ್ರ ದಲಿತರು ಆರೋಗ್ಯದಿಂದ ಬದುಕಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಮಂತ್ರಿಗಳು ಗಮನಹರಿಸಿ ಕಾರ್ಯಪ್ರವ್ರತ್ತ-­ರಾಗಬೇಕಾಗಿದೆ. ದಲಿತ ಸಮುದಾಯದ ಬಗ್ಗೆ  ಕಾಳಜಿಯುಳ್ಳ ಸಮಾಜಕಲ್ಯಾಣ ಸಚಿವ ಎಚ್‌.ಆಂಜನೇಯ, ಮುಖ್ಯಮಂತ್ರಿ ಸಿದ್ದ­ರಾಮಯ್ಯ ಹಾಗೂ  ಈ ಕ್ಷೇತ್ರದ ಶಾಸಕರು ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT