ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ನ್ಯಾಯ ಸಿಗಲಿ

Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿ ಸಮೀಪದ ತೋಟವೊಂದರಲ್ಲಿ ಇತ್ತೀಚೆಗೆ ಇಬ್ಬರು ದಲಿತ ಕೂಲಿಗಳ ಹತ್ಯೆಯಾಗಿದೆ. ಇಂದಿನ ಹೈಟೆಕ್ ಯುಗದಲ್ಲೂ ದಲಿತರ ಸ್ಥಿತಿ ಎಷ್ಟು ದಾರುಣವಾಗಿದೆ ಎಂಬುದನ್ನು ಈ ಘಟನೆ ತಿಳಿಸುತ್ತದೆ.

ಕೂಲಿ ಕಾರ್ಮಿಕರಾದ ನಂಜಯ್ಯ (50) ಮತ್ತು ಕೃಷ್ಣಯ್ಯ (60) ಅಂದು ದೇಶವಳ್ಳಿ ಗ್ರಾಮದಲ್ಲಿನ ಬಾಳೆ ತೋಟವೊಂದಕ್ಕೆ ಕೂಲಿಗೆ ತೆರಳಿದ್ದ ಸಂದರ್ಭದಲ್ಲಿ ಅವರ ಶಿರಚ್ಛೇದನವಾಗಿದೆ.

ಕೋಲಾರ ಜಿಲ್ಲೆಯ ಕಂಬಾಲಪಲ್ಲಿ ದುರಂತ ಮತ್ತು ಮಹಾರಾಷ್ಟ್ರದ ಖೈರ್ಲಾಂಜಿ ಪ್ರಕರಣಗಳು ದಲಿತರು ಅನುಭವಿಸುತ್ತಿರುವ ಅಸುರಕ್ಷಿತ ವಾತಾವರಣಕ್ಕೆ ಕೈಗನ್ನಡಿಯಂತಿವೆ.

ಇಂಥ ಎಷ್ಟೋ ಪ್ರಕರಣಗಳಲ್ಲಿ ದಲಿತರಿಗೆ ಸಿಗಬೇಕಾದ ಸಹಜ ನ್ಯಾಯ ಸಿಗುವುದೇ ಇಲ್ಲ. ಅವರು ನ್ಯಾಯಕ್ಕಾಗಿ ಮಾಡುವ ಹೋರಾಟಗಳು ಮೌನ ಮತ್ತು ಹತಾಶೆಯಲ್ಲಿ ಕೊನೆಯಾಗುವುದೇ ಹೆಚ್ಚು. ಇದು ತಪ್ಪಬೇಕಾದರೆ ಸರ್ಕಾರ ಬಿಗಿ ನಿಲುವು ತಾಳಬೇಕು ಹೀಗಾಗಿ ಸಂತೆಮರಹಳ್ಳಿ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿ ಸತ್ಯ ಹೊರಗೆಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT