ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಳಕೆ ತಪ್ಪಿಸಿ

Last Updated 6 ಜನವರಿ 2016, 19:53 IST
ಅಕ್ಷರ ಗಾತ್ರ

ಅಸ್ಪೃಶ್ಯತೆ ನಿವಾರಣೆಗಾಗಿ ಇರುವ ಮಹತ್ವದ ಯೋಜನೆಗಳು ಯಾವ ರೀತಿ ದುರ್ಬಳಕೆಯಾಗುತ್ತವೆ ಎನ್ನುವುದಕ್ಕೆ, ಅಂತರ್ಜಾತಿ ವಿವಾಹಕ್ಕೆ ನೀಡುವ  ಪ್ರೋತ್ಸಾಹಧನಕ್ಕಾಗಿ ಒಬ್ಬರೇ ದಂಪತಿ ಮತ್ತೆ ಮತ್ತೆ ಮದುವೆಯಾಗಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಪ್ರಕರಣವೇ ಸಾಕ್ಷಿ (ಪ್ರ.ವಾ., ಜ. 5). ಇಂತಹ ಪ್ರಕರಣಗಳಿಂದ  ನಿಜವಾದ ಫಲಾನುಭವಿಗಳನ್ನು ವಂಚಿಸಿದಂತಾಗುತ್ತದೆ.

ಸಾಮಾನ್ಯ ಜನರು ಯಾವುದೇ ರೀತಿಯ ಪ್ರಮಾಣಪತ್ರ ಪಡೆಯಲು ಎಷ್ಟೆಲ್ಲ ಅಲೆದಾಡಬೇಕಾಗುತ್ತದೆ. ಆದರೆ ನಮ್ಮ ಸಮಾಜದಲ್ಲಿ ವಂಚಕರಿಗೆ ಮಾತ್ರ ಎಲ್ಲಿ ಹೋದರೂ ಹನ್ನೆರಡು ದಾರಿಗಳುಂಟು. ಯಾವಾಗ ಬೇಕಾದರೂ ಯಾವ ಪ್ರಮಾಣ ಪತ್ರವನ್ನಾದರೂ ಅವರು ಸುಲಭವಾಗಿ ಪಡೆಯಬಲ್ಲರು.

ಮೇಲ್ಜಾತಿಯ ಹುಡುಗ ಅಥವಾ ಹುಡುಗಿಯು ಕೆಳಜಾತಿಯವರನ್ನು ಅಥವಾ ಕೆಳಜಾತಿಯ ಹುಡುಗ, ಹುಡುಗಿಯು ಮೇಲ್ಜಾತಿಯವರನ್ನು ಪ್ರೀತಿಸುವ ಸಂದರ್ಭದಲ್ಲಿ ಸಾಮಾಜಿಕವಾಗಿ ಎಷ್ಟೆಲ್ಲ ಕಷ್ಟಪಟ್ಟಿರುತ್ತಾರೆ. ಇಂತಹ ನಿಜವಾದ ಫಲಾನುಭವಿಗಳಿಗೆ ಯೋಜನೆಗಳು ದಕ್ಕುವಂತೆ ಮಾಡಬೇಕು. ವಂಚಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT