ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವಕೀಲರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ವಕೀಲರ ಮೇಲಿನ ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಕೊಡುವ ಬದಲು, ಅವರ ದೇಶಪ್ರೇಮ ಸಾಬೀತುಪಡಿಸಲು ಕೋರ್ಟ್ ಅವರಿಗೆ ಇನ್ನೊಂದು ಅವಕಾಶ ಮಾಡಿಕೊಡಬೇಕು.

ಅವರನ್ನು ಸೇನೆಗೆ ಸೇರಿಸಿಕೊಂಡು ಸಿಯಾಚಿನ್‌ಗೆ ಕಳುಹಿಸಿಕೊಡಬೇಕು. ಅಲ್ಲಿ ಕೇವಲ ಒಂದು ತಿಂಗಳು ಗಡಿ ಕಾಯುವಂತೆ ಮಾಡಿದರೆ ಅವರ ದೇಶಭಕ್ತಿಯ ಆಳ ಗೊತ್ತಾಗುತ್ತದೆ. ತಮ್ಮ ಪೌರುಷ, ಧೈರ್ಯ ಮತ್ತು ವೀರಾವೇಶವನ್ನು ಅವರು ಕೇವಲ ಒಂದು ತಿಂಗಳು ಸಿಯಾಚಿನ್‌ನಲ್ಲಿ ತೋರಿಸಿದರೂ ಸಾಕು, ಅವರನ್ನು ದೆಹಲಿ ಹೈಕೋರ್ಟ್ ಕ್ಷಮಿಸಿ ಬಿಡಬಹುದು.

ಈ ವಕೀಲರ ಅಟಾಟೋಪವನ್ನು ನೋಡಿಕೊಂಡು ಕೈಕಟ್ಟಿ ನಿಂತಿದ್ದ ದೆಹಲಿಯ ‘ದೇಶಭಕ್ತ’ ಪೊಲೀಸರಿಗೂ ತಮ್ಮ ದೇಶಭಕ್ತಿ ತೋರಿಸಲು ಇನ್ನೊಂದು ಅವಕಾಶ ಕೊಡುವುದು ಒಳಿತು. ಈ ಪೊಲೀಸರನ್ನು ಗಡಿ ಭದ್ರತಾ ಪಡೆಗೆ ಒಂದು ತಿಂಗಳ ಮಟ್ಟಿಗೆ ನಿಯೋಜಿಸಿ, ಪಾಕಿಸ್ತಾನದ ಉಗ್ರಗಾಮಿಗಳು ಅಡಗಿರುವ ಕಾಶ್ಮೀರ ಕಣಿವೆಗೆ ಕಳುಹಿಸಿಕೊಡುವುದು ಸೂಕ್ತ. ಆಗ ಇವರೆಲ್ಲರ ನಿಜವಾದ ದೇಶಭಕ್ತಿ ಹೊರಬರುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.